ಮುಂಬೈ: Tulu Times l ಭಾರತೀಯ ಚಿತ್ರರಂಗದ ದಿಗ್ಗಜ ಪ್ಲೇಬ್ಯಾಕ್ ಗಾಯಕಿ ಆಶಾ ಭೋಸ್ಲೆ ಅವರು 92ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಭಾರತೀಯ ಸಂಗೀತ ಲೋಕದ ಒಂದು ಯುಗ ಅಂತ್ಯಗೊಂಡಂತಾಗಿದೆ.
ಆಶಾ ಭೋಸ್ಲೆ ಅವರು ಏಪ್ರಿಲ್ 11, 2026ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ದಣಿವು ಹಾಗೂ ಉಸಿರಾಟದ ಸೋಂಕಿನಿಂದ ದಾಖಲೆಯಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗ ವೈಫಲ್ಯದಿಂದ ಕೊನೆಯುಸಿರೆಳೆದಿರುತ್ತಾರೆ. 1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಂಗ್ಲಿಯಲ್ಲಿ ಜನಿಸಿದ ಅಶಾ ಭೋಸ್ಲೆ (ಅಶಾ ಮಂಗೇಶ್ಕರ್) ಅವರು ಸುಮಾರು ಏಳು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಹಿಂದಿ, ಮರಾಠಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿಯೇ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.
ಆಶಾ ಭೋಸ್ಲೆ ಅವರಿಗೆ ಪದ್ಮ ವಿಭೂಷಣ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಫ್ರಾನ್ಸ್ ಸರ್ಕಾರದ ‘ಆರ್ಡರ್ ಆಫ್ ಆರ್ಟ್ಸ್ ಆ್ಯಂಡ್ ಲೆಟರ್ಸ್’ ಪ್ರಶಸ್ತಿಯೂ ಅವರಿಗೆ ದೊರಕಿದೆ. ಭಾರತೀಯ ಸಿನೆಮಾ ಸಂಗೀತದಲ್ಲಿ ಹೊಸ ಪ್ರಯೋಗಗಳಿಗೆ ದಾರಿ ತೆರೆದ ಪಥಪ್ರದರ್ಶಕಿಯಾಗಿ ಅವರು ಗುರುತಿಸಿಕೊಂಡಿದ್ದರು.
ಅವರ ನಿಧನ ಸುದ್ದಿ ತಿಳಿದ ಕೂಡಲೇ ಬಾಲಿವುಡ್ ನಟರು, ನಿರ್ದೇಶಕರು, ಸಂಗೀತಗಾರರು ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪ್ರಸಿದ್ಧ ಹಾಡುಗಳು ಮತ್ತೆ ಹರಿದಾಡುತ್ತಿದ್ದು, ಅವರ ಸ್ವರ ಎಂದಿಗೂ ಅಜರಾಮರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿವೆ. ಆಶಾ ಭೋಸ್ಲೆ ಅವರ ನಿಧನ ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟ. ಆದರೆ ಅವರ ಹಾಡುಗಳು ಸದಾ ಜನಮನಗಳಲ್ಲಿ ಜೀವಂತವಾಗಿಯೇ ಉಳಿಯಲಿವೆ.
Asha Bhosle’s death: A huge loss to the Indian music world – ತುಳುಟೈಮ್ಸ್
ಇದನ್ನೂ ಓದಿ :ಕಾಲಿನ ಪಾದಗಳ ರಕ್ಷಣೆ: ಆರೋಗ್ಯಕರ ಜೀವನಕ್ಕೆ ಸರಳ ಕ್ರಮ ಹೀಗಿರಲಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Rbe3FHAhoVM?si=P9mRXR7ZLLOw2I2a











