ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಚಂಡಮಾರುತ ಇಲ್ಲದಿದ್ದರೂ ಹವಾಮಾನದಲ್ಲಿ‌ ಬದಲಾವಣೆ

ಕರ್ನಾಟಕ : Tulu Times l ರಾಜ್ಯದ ಹಲವೆಡೆ ಬೇಸಿಗೆ ಮಳೆ ಆರಂಭವಾಗಿ ಬಿಸಿಲಿಗೆ ಸ್ವಲ್ಪ ನಿರಾಳತೆ ತಂದಿದ್ದರೂ, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ವಾಯುಮಂಡಲದ ತೇವಾಂಶದ ಮೇಲೆ ಅವಲಂಬಿತವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಐಎಂಡಿ ಮಾಹಿತಿ ಪ್ರಕಾರ, ಪ್ರಸ್ತುತ ಯಾವುದೇ ಚಂಡಮಾರುತ ಅಥವಾ ಲೋ-ಪ್ರೆಶರ್ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆ ಇಲ್ಲ. ಬೇಸಿಗೆ ಮಳೆಯಾಗಲು ತೇವಾಂಶ 70% ಕ್ಕಿಂತ ಹೆಚ್ಚು ಆಗಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಸುಮಾರು 40% ಮಟ್ಟದಲ್ಲಿದೆ. ಸಾಮಾನ್ಯವಾಗಿ 40% ರಿಂದ 70% ತೇವಾಂಶ ಇರುವ ಸಂದರ್ಭದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇರುತ್ತದೆ. ಈ ಮಿತಿಯನ್ನು ಮೀರಿ ತೇವಾಂಶ ಹೆಚ್ಚಾದಾಗ ಮಾತ್ರ ಉತ್ತಮ ಮಳೆಯಾಗುತ್ತದೆ.

ಬೆಂಗಳೂರಿನಲ್ಲಿ ತೇವಾಂಶ 50% ದಾಟಿದರೆ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಮಾದರಿಗಳ ದೃಷ್ಟಿಯಿಂದ ಬೆಂಗಳೂರು ನಗರವನ್ನು ಐಎಂಡಿ ಅಧಿಕಾರಿಗಳು ಹಿಲ್‌ಸ್ಟೇಷನ್‌ಗೆ ಸಮಾನವಾಗಿ ಪರಿಗಣಿಸುತ್ತಾರೆ.

ಕರಾವಳಿ ಜಿಲ್ಲೆಗಳಾದ ಸುಳ್ಯ, ಸುಬ್ರಹ್ಮಣ್ಯ, ಕಡಬ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಯಲ್ಲಿ ಗುಡುಗು-ಮಿಂಚಿನೊಂದಿಗೆ ಮಧ್ಯಮದಿಂದ ಉತ್ತಮ ಮಳೆಯಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರ ಕೆಲವೊಮ್ಮೆ ಭಾರಿ ಮಳೆಯಾಗುತ್ತಿದ್ದರೂ, ಹೆಚ್ಚಿನ ಸಮಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದೆ.

ಕಳೆದ ಕೆಲವು ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳಗಿನ ಸಮಯದಲ್ಲಿ ತಂಪಾದ ವಾತಾವರಣ ಕಂಡುಬಂದಿದೆ. ಬೆಳಿಗ್ಗೆ ಸಸ್ಯಗಳು ಮತ್ತು ಹುಲ್ಲಿನ ಮೇಲೆ ತೇವಾಂಶ ಕಾಣಿಸಿಕೊಂಡಿದ್ದು, ಅದು ಸುಮಾರು 35% ಮಟ್ಟ ತಲುಪಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಈಗ ಮಳೆ ಬಂದ ಪ್ರದೇಶಗಳಲ್ಲಿ 30°C ರಿಂದ 34°C ಇದ್ದ ತಾಪಮಾನ 38°C ರಿಂದ 40°Cವರೆಗೆ ಏರಬಹುದು. ತಾಪಮಾನ ಹೆಚ್ಚಾದಂತೆ ತೇವಾಂಶವೂ ಹೆಚ್ಚಾಗಿ, ಬೇಸಿಗೆ ಮಳೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ.

ಹವಾಮಾನ ತಜ್ಞರ ಪ್ರಕಾರ, ಕರಾವಳಿ, ಮಲೆನಾಡು ಮತ್ತು ರಾಜ್ಯದ ಹಲವೆಡೆ ಮುಂದಿನ 4–5 ದಿನಗಳಲ್ಲಿ ಮಧ್ಯಮ ಮಟ್ಟದ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಭಾರತೀಯ ಮಹಾಸಾಗರದಲ್ಲಿ ಯಾವುದೇ ಚಂಡಮಾರುತ ಅಥವಾ ಲೋ-ಪ್ರೆಶರ್ ರೂಪುಗೊಳ್ಳದಿದ್ದರೆ, ಈ ವರ್ಷ ದಕ್ಷಿಣ ಪಶ್ಚಿಮ ಮಾರುತ (ಮೋನ್ಸೂನ್) ಮುಂಚಿತವಾಗಿಯೇ ಪ್ರವೇಶಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಈ ವರ್ಷ ಕರ್ನಾಟಕದಲ್ಲಿ ಮಳೆಯ ಸ್ಥಿತಿ ತೇವಾಂಶದ ಮಟ್ಟದ ಮೇಲೆ ಅವಲಂಬಿತವಾಗಿದ್ದು, ಚಂಡಮಾರುತಗಳ ಪ್ರಭಾವ ಇಲ್ಲದಿದ್ದರೂ ಸಹ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ.

There is no cyclone this year, but the weather is changing – ತುಳುಟೈಮ್ಸ್

ಇದನ್ನೂ ಓದಿ :ಐರನ್ ಕೊರತೆಯನ್ನು ಕಡೆಗಣಿಸದಿರಿ : ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/Rbe3FHAhoVM?si=1bnAt76gzxxKpQem

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page