ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ

ಬಂದಾರು : Tulu Times l ಎ.08 ರಂದು ಬಂದಾರು ಗ್ರಾಮ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು, ಅರ್ಚಕರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಎಪ್ರಿಲ್ 08 ರಂದು ಬೆಳಗ್ಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸoತರ್ಪಣೆ ನೆರವೇರಿದರೆ, ರಾತ್ರಿಯಿಂದ ಭಜನೆ, ತೇರ ಕಲಶ, ಉತ್ಸವ ಬಲಿ, ರಕ್ತೇಶ್ವರಿ ನೇಮೋತ್ಸವ, ಶ್ರೀ ಸದಾಶಿವ ದೇವರ ರಥೋತ್ಸವ, ಶ್ರೀ ದೇವರು ಮೂಲ ಕ್ಷೇತ್ರಕ್ಕೆ ಭೇಟಿ, ಭೂತ ಬಲಿ, ಶಯನೋತ್ಸವ ನಡೆಯಲಿರುವುದು ಎಂದು ವರದಿಯಾಗಿದೆ.

Belthangady MLA Harish Poonja visits the annual festival of Kuraya Sri Sadashiva Devara – ತುಳುಟೈಮ್ಸ್

ಇದನ್ನೂ ಓದಿ :ಎ.08 ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/fyRbYgSgCAw?si=NWSWkf_YUGrkrfw6

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page