ಬ್ರೇಕಿಂಗ್ ನ್ಯೂಸ್
ದೇಶ

ಕನಸಿಗೆ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Kanpura:ಕನಸಿನಲ್ಲಿ ಬಂದು ಕೆಲವರು ಭಯಹುಟ್ಟಿಸುತ್ತಿದ್ದಾರೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 11ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಆರವ್‌ ರಾಜ್ ಮಿಶ್ರಾ (16) ಅತ್ಮಹತ್ಯೆ ಮಾಡಿಕೊಡ ವಿದ್ಯಾರ್ಥಿ.

ಉತ್ತರ ಪ್ರದೇಶದ ಕಾನ್ಸುರದ ನಿವಾಸಿ ಆರವ್‌‌ ರಾಜ್‌ ಮಿಶ್ರಾ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಸಂಭಂದಿಕರ ಮನೆಯ ಪೂಜೆಯ ಹಿನ್ನೆಲೆ ಆತನ ಪೋಷಕರು ಭಾಗಲ್ಪುರಕ್ಕೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿದ್ದ ವಿದ್ಯಾರ್ಥಿಯು ಸ್ವಪ್ನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಪೂಜೆ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.ಕೋಣೆಯಲ್ಲಿ ನೇಣು ಬಿಗಿದ ಸ್ಥಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಹಲವು ದಿನಗಳ ಹಿಂದೆ ಸ್ವಪ್ನದಲ್ಲಿ ಮೂರ್ನಾಲ್ಕು ಜನರ ತಂಡವೊಂದು ಬಂದು “ನಿನ್ನ ಕುಟುಂಬವನ್ನು ನೀನೆ ನಿರ್ನಾಮ ಮಾಡು..ಇಲ್ಲದಿದ್ದಲ್ಲಿ ನೀನೇ ಸಾಯಿ..!ಎಂದು ಭಯಗೊಳಿಸಿದ್ದರು. ಈ ಸ್ವಪ್ನಕ್ಕೆಹೆದರಿದ ನಾನು ಬಹಳ ಸಮಯದಿಂದ ತೊಂದರೆಗೆ ಒಳಗಾಗಿದ್ದೆ, ಆ ಭಯಾನಕ ಧ್ವನಿ ನನ್ನನ್ನು ಕಾಡುತ್ತಿತ್ತು..ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ.” ಎಂದು ಆತ ಬರೆದ ಡೆತ್‌ನೋಟ್‌ ಉಲ್ಲೇಖವಾಗಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಒದಿ: Vittla: ಹನಿಟ್ರ್ಯಾಪ್‌ ಪ್ರಕರಣ – ಪ್ರಮುಖ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess   

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page