ಬಂದಾರು : Tulu Times l ಬಂದಾರು ಗ್ರಾಮ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶರತ್ ಕೃಷ್ಣ ಪಡ್ವೆಟ್ನಾಯರವರ ಕೃಪಾಶಿರ್ವಾದಗಳೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಗಳ ನೇತೃತ್ವದಲ್ಲಿ ಎಪ್ರಿಲ್ 08 ರಂದು ಬೆಳಗ್ಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸoತರ್ಪಣೆ ನೇರವೇರಿತು.

ರಾತ್ರಿ ಭಜನೆ, ತೇರ ಕಲಶ, ಉತ್ಸವ ಬಲಿ, ರಕ್ತೇಶ್ವರಿ ನೇಮೋತ್ಸವ, ಶ್ರೀ ಸದಾಶಿವ ದೇವರ ರಥೋತ್ಸವ, ಶ್ರೀ ದೇವರು ಮೂಲ ಕ್ಷೇತ್ರಕ್ಕೆ ಭೇಟಿ, ಭೂತ ಬಲಿ, ಶಯನೋತ್ಸವ ನಡೆಯಲಿರುವುದು. ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳು, ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು, ಅರ್ಚಕರು, ಪ್ರಮುಖರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
A.08 Annual festival of Kuraya Sri Sadashiva Deva – ತುಳುಟೈಮ್ಸ್
ಇದನ್ನೂ ಓದಿ :ಮಲ್ಟಿ-ಪೇರ್ ಕಿಡ್ನಿ ಎಕ್ಸ್ಚೇಂಜ್: ಅಂಗ ದಾನ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಮಹತ್ವದ ಹೆಜ್ಜೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/fyRbYgSgCAw?si=wi0m1cL4Ea-OL-Ij











