ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಕಾಡ್ಗಿಚ್ಚಿನಿಂದ ಅಪಾರ ನಷ್ಟ : ಅರಣ್ಯ ಇಲಾಖೆ ಅಧಿಕಾರಿಗಳ ತಂಡದಿಂದ ಬೆಂಕಿ ನಿಯಂತ್ರಿಸಲು ಪ್ರಯತ್ನ

ಬೆಳ್ತಂಗಡಿ : Tulu Times l ಮೊಗ್ರು ಗ್ರಾಮ ಬರುoಗುಡೇಲು ಸಮೀಪ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಪರಿಣಾಮ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೂ ಬೆಂಕಿ ಹಬ್ಬಿದೆ. ಇದರಿಂದಾಗಿ ಇನ್ನಷ್ಟು ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸುವ ಸಾಧ್ಯತೆ ಇರುವುದರಿಂದ ಆತಂಕ ಉಂಟಾಗಿದೆ.

ಈ ಕಾಡ್ಗಿಚ್ಚಿನಿಂದ ಅಪಾರ ನಷ್ಟ ಉಂಟಾಗಿದ್ದು, ಘಟನೆ ಗಮನಿಸಿದ ತಕ್ಷಣ ಅರಣ್ಯ ಇಲಾಖೆ ಹಾಗೂ ನೆರೆಯವರಿಗೆ ಸಹ ಮಾಹಿತಿ ನೀಡಿ, ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಲಾಗಿದೆ. ಸ್ಥಳೀಯರು ಹಾಗೂ ಸಂಬಂಧಪಟ್ಟ  ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ತಕ್ಷಣ ಕ್ರಮ ಕೈಗೊಂಡು ಬೆಂಕಿ ನಂದಿಸಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿರುವುದು ವರದಿಯಾಗಿದೆ.

ಇತ್ತೀಚೆಗೆ ಕಾಡ್ಗಿಚ್ಚುಗಳು ಪ್ರಕೃತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸುತ್ತಿವೆ. ಅವುಗಳನ್ನು ತಡೆಗಟ್ಟುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ನಾವು ಸ್ವಲ್ಪ ಜಾಗ್ರತೆ ವಹಿಸಿದರೆ, ನಮ್ಮ ಅರಣ್ಯಗಳನ್ನು ಮತ್ತು ಪ್ರಕೃತಿಯನ್ನು ಉಳಿಸಬಹುದು.

Huge loss due to forest fire: Forest Department officials try to control the fire – ತುಳುಟೈಮ್ಸ್

ಇದನ್ನೂ ಓದಿ :ಏ.07 ಪಿಯುಸಿ ರಿಸಲ್ಟ್ : 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆಗೆ ಸಿದ್ಧತೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=GL3w0I4IdGcIDLCy

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page