ಬ್ರೇಕಿಂಗ್ ನ್ಯೂಸ್
ಪುತ್ತೂರು

ಭೀಮ‌ ಗೋಲ್ಡ್ ಸಹಕಾರದಿಂದ ಬೈಂದೂರು ಸೇವಧಾಮದಲ್ಲಿ ನೀರಿನ ಘಟಕ ಉದ್ಘಾಟನೆ

ಬೈಂದೂರು : Tulu Times l ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಸ್ಟ್ರೀಸ್ ಯೋಜನೆಯಡಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಸೇವಾಧಾಮ ಬೈಂದೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವು ಮಾರ್ಚ್ 31ರಂದು ಉದ್ಘಾಟನೆಗೊಂಡಿತು.

ಬೈಂದೂರು ಸೇವಾಧಾಮ  ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ನಡೆಸಲಾದ ಈ ಕಾರ್ಯಕ್ರಮವನ್ನು, ಬೈಂದೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ  ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿ, ಭೀಮ ಗೋಲ್ಡ್ ಸಂಸ್ಥೆಯ CSR ನಿಂದ ನಮ್ಮ ಸೇವಾಧಾಮ ಸಂಸ್ಥೆಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಪುನಶ್ಚೇತನವನ್ನು ಪಡೆದುಕೊಳ್ಳುತ್ತಿರುವ ದಿವ್ಯಾಂಗರು  ಸಕ್ಷಮವಾಗಿ ಉಜ್ವಲ ಬದುಕನ್ನು ಕಾಣಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿಶ್ವನಾಥ್ ಶೆಟ್ಟಿ , ಗೋಪಾಲ ವರ್ಸೆ, ಭಾನುಮತಿ, ರವಿಚಂದ್ರ, ಮಂಜುಳ  ವಿಷ್ಣುಪ್ರಸಾಧ್, ಸೇವಾಭಾರತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ತೆಂಕಿಲ್ಲಾಯ, ಗ್ರಾಮಸ್ಥರು, ಪ್ರಮುಖರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Water plant inaugurated at Byndoor Sevadham in collaboration with Bhima Gold – ತುಳುಟೈಮ್ಸ್

ಇದನ್ನೂ ಓದಿ :ನೀವು ನಿಯಮಿತವಾಗಿ ಸ್ವಲ್ಪ ಸಮಯ ಧ್ಯಾನ ಮಾಡಿದರೆ ತ್ವರಿತ ಪರಿಣಾಮ ಕಾಣುತ್ತೀರಿ…!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/2AWkk7R62HI?si=XzsITFmKZ0mHb2uT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page