ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ‌ಡಾಕ್ಟರೇಟ್ ಪ್ರಕಟ

ಮಂಗಳೂರು : Tulu Times l ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾರ್ಚ್ 28ರಂದು ನಡೆಯಲಿರುವ ಪದವಿ ಪ್ರದಾನ ಸಮಾರಂಭದಲ್ಲಿ ಮೂರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲು ನಿರ್ಧರಿಸಿದೆ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಈ ಘೋಷಣೆಯನ್ನು ಮಾಡಿದ್ದು, ಸಮಾಜ ಸೇವೆ, ಪರಂಪರೆಯ ಕಲಾ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಮೂವರಿಗೆ ಈ ಗೌರವ ಲಭಿಸಲಿದೆ ಎಂದಿರುತ್ತಾರೆ.

ಗೌರವಕ್ಕೆ ಆಯ್ಕೆಯಾದವರು:

* ಹರೇಕಳ ಹಾಜಬ್ಬ ; ಪದ್ಮಶ್ರೀ ಪುರಸ್ಕೃತರಾದ ಹಾಜಬ್ಬ ಅವರು ಸರಳ ಹಣ್ಣು ಮಾರಾಟಗಾರರಾಗಿದ್ದರೂ, ತಮ್ಮ ಊರಾದ ಹರೇಕಳ ಗ್ರಾಮದಲ್ಲಿ ಶಾಲೆ ಸ್ಥಾಪಿಸಿ ಶಿಕ್ಷಣದ ಬೆಳಕು ಹರಿಸಿದ ಮಹನೀಯರು. ಅವರ ಸೇವೆಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

* ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ):

ತೇಂಕುತಿಟ್ಟು ಯಕ್ಷಗಾನ ಕ್ಷೇತ್ರದ ದಿಗ್ಗಜರಾದ ಗೋವಿಂದ ಭಟ್ ಅವರು ಸುಮಾರು 70 ವರ್ಷಗಳ ಕಾಲ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದರು. ಧರ್ಮಸ್ಥಳ ತಂಡದೊಂದಿಗೆ ದೀರ್ಘಕಾಲ ಕೆಲಸ ಮಾಡಿದ ಅವರು ‘ದಶಾವತಾರಿ’ ಎಂದೇ ಪ್ರಸಿದ್ಧರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2016) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು.

* ಡಾ. ರವೀಶ್ ಪಡುಮಳೆ :

ದಕ್ಷಿಣ ಕನ್ನಡ ಜಿಲ್ಲೆಯವರಾದ ಡಾ. ಪಡುಮಲೆ ಅವರು ದೈವ ನರ್ತಕ, ಚಿಂತಕ ಹಾಗೂ ವಾಗ್ಮಿಯಾಗಿ ಹೆಸರಾಗಿದ್ದಾರೆ. ಉಜಿರೆಯ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದು, ದೈವ ನರ್ತನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಗೌರವವು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಅಸಾಧಾರಣ ಸೇವೆಗಳಿಗೆ ಮಾನ್ಯತೆ ನೀಡುವಂತಾಗಿದೆ.

Mangalore University Honorary Doctorate announced – ತುಳುಟೈಮ್ಸ್

ಇದನ್ನೂ ಓದಿ : ಕೊರಿಂಜದಲ್ಲಿ 45ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/aDo_44I0S8Y?si=q-WABeHjESW5V6KR

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page