ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇಂಧನ ಕೊರತೆ ಬಗ್ಗೆ ಆತಂಕ ಬೇಡ, ಜನರು ಅಧಿಕೃತ ಮಾಹಿತಿಯನ್ನೇ ನಂಬಿ : ಸರ್ಕಾರ ಮನವಿ

ಕರ್ನಾಟಕ : Tulu Times l ಇಂಧನ ಕೊರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗೆ ತಕ್ಕ ಉತ್ತರವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಸರಬರಾಜು ಸಂಪೂರ್ಣವಾಗಿ ಸ್ಥಿರವಾಗಿದ್ದು, ಯಾವುದೇ ಕೊರತೆ ಇಲ್ಲ ಎಂದು ಸರ್ಕಾರ ಜನತೆಗೆ ಭರವಸೆ ನೀಡಿದೆ.

ಸರ್ಕಾರದ ಮಾಹಿತಿ ಪ್ರಕಾರ, ಭಾರತದಲ್ಲಿ ಸದ್ಯ ಸುಮಾರು 60 ದಿನಗಳಿಗೆ ಸಾಕಾಗುವಷ್ಟು ಇಂಧನ ಸಂಗ್ರಹವಿದ್ದು, ಒಟ್ಟು ಸಾಮರ್ಥ್ಯ 74 ದಿನಗಳ ಮಟ್ಟದಲ್ಲಿದೆ. ಜಾಗತಿಕ ಮಟ್ಟದಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಇದ್ದರೂ, ಭಾರತದಲ್ಲಿ ಇಂಧನ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಎರಡು ತಿಂಗಳಿಗೆ ಬೇಕಾದಷ್ಟು ಕ್ರೂಡ್ ಆಯಿಲ್ ಖರೀದಿ ಈಗಾಗಲೇ ಖಚಿತಪಡಿಸಿಕೊಂಡಿರುವುದರಿಂದ, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇಲ್ಲ. ಇಂಧನ ಕೊರತೆ ಬಗ್ಗೆ ಹರಡುತ್ತಿರುವ ಸುದ್ದಿಗಳು ತಪ್ಪು ಮತ್ತು ಆಧಾರರಹಿತವೆಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಕಂಡುಬಂದ ಭಯಭೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ತಪ್ಪು ಮಾಹಿತಿಯಿಂದ ಪ್ರೇರಿತವಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸರಬರಾಜು ಸುಗಮವಾಗಿರಲು ತೈಲ ಕಂಪನಿಗಳು ಪೆಟ್ರೋಲ್ ಬಂಕ್‌ಗಳಿಗೆ ಹೆಚ್ಚುವರಿ ಕ್ರೆಡಿಟ್ ಸೌಲಭ್ಯಗಳನ್ನು ನೀಡಿದ್ದು, ಡಿಪೋಗಳಲ್ಲಿ 24 ಗಂಟೆಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಗತ್ತಿನ ಹಲವಾರು ದೇಶಗಳು ಇಂಧನ ಕೊರತೆ ಎದುರಿಸುತ್ತಿದ್ದರೂ, ಭಾರತದಲ್ಲಿ ಯಾವುದೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ

ಎಲ್‌ಪಿಜಿ ವಿಚಾರದಲ್ಲೂ ಉತ್ತಮ ಸ್ಥಿತಿ ಇದೆ. ದೇಶೀಯ ಉತ್ಪಾದನೆ ಹೆಚ್ಚಿಸಲಾಗಿದ್ದು, ದಿನನಿತ್ಯದ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸಿಲಿಂಡರ್‌ಗಳು ಲಭ್ಯವಿವೆ. ಜೊತೆಗೆ, ವಿವಿಧ ದೇಶಗಳಿಂದ ದೊಡ್ಡ ಪ್ರಮಾಣದ ಆಮದು ಕೂಡ ನಡೆಯುತ್ತಿದೆ. ಕಳ್ಳಬಜಾರ್ ಮತ್ತು ಸಂಗ್ರಹಣೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ, ಸರ್ಕಾರ ಪೈಪ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ಉತ್ತೇಜಿಸುತ್ತಿದೆ. ಇದು ಕಡಿಮೆ ವೆಚ್ಚದ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪರ್ಯಾಯವೆಂದು ತಿಳಿಸಿದೆ. ಒಟ್ಟಿನಲ್ಲಿ, ಇಂಧನ ಪೂರೈಕೆ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ. ಜನರು ಕೇವಲ ಅಧಿಕೃತ ಮಾಹಿತಿಯನ್ನೇ ನಂಬಿ, ಅಪಪ್ರಚಾರಗಳಿಂದ ದೂರವಿರಬೇಕು ಎಂದು ಸರ್ಕಾರ ಮನವಿ ಮಾಡಿದೆ.

Don’t worry about fuel shortage, people should trust official information: Government appeals – ತುಳುಟೈಮ್ಸ್

ಇದನ್ನೂ ಓದಿ : ವನ್ಯಜೀವಿ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಇಲ್ಲ : ಈಶ್ವರ್ ಖಂಡ್ರೆ ಸ್ಪಷ್ಟನೆ

==

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/XqT2zKOY-4o?si=_sTuzodLWvX_rxMg

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page