Ayodhya Ram Mandir: ದೀಪಾವಳಿ ಹಬ್ಬದ ಮುಗಿದ ಬೆನ್ನಲ್ಲೇ ಆಯೋಧ್ಯೆಯಿಂದ ಸಿಹಿ ಸುದ್ದಿಯೊಂದು ಬಂದಿದೆ. ಅಯೋಧ್ಯಾ ರಾಮ ಮಂದಿರ ನಿರ್ಮಾಣದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿಯನ್ನು ನೀಡಿದೆ. ಕಾಮಗಾರಿ ಪೂರ್ಣಗೊಂಡಿರುವ ವಿಚಾರ ಭಕ್ತರಿಗೆ ತಿಳಿಸಲು ಖುಷಿಯಾಗುತ್ತಿದೆ ಎಂದು ಟ್ರಸ್ಟ್ ಮಾಹಿತಿ ಹಂಚಿಕೊಂಡಿದೆ.
ಶ್ರೀ ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಮಂದಿರ ಹಾಗೂ ಅದರ ಒಳಗಿನ ಆರು ಮಂದಿರಗಳು ಕೂಡ ಪೂರ್ಣವಾಗಿವೆ. ಕೋಟೆಯ ಗೋಡೆಯೊಳಗಿನ ಆರು ದೇವಾಲಯಗಳಾದ ಮಹಾದೇವ, ಗಣೇಶ, ಹನುಮಂತ, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ಮಂದಿರ ಪೂರ್ಣವಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಕಾರ, ದೇಗುಲದ ಮೇಲೆ ಧ್ವಜಸ್ತಂಭಗಳು ಮತ್ತು ಕಳಶಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಋಷಿಗಳಾದ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯರ ಏಳು ಮಂಟಪ (ಸಪ್ತ ಮಂಟಪ) ಗಳು ಸಹ ಪೂರ್ಣಗೊಂಡಿವೆ.
ಸಂತ ತುಳಸಿದಾಸ ಮಂದಿರವೂ ಪೂರ್ಣವಾಗಿದ್ದು. ಜಟಾಯು ಮತ್ತು ಅಳಿಲಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಂದರ್ಶಕರ ವ್ಯವಸ್ಥೆಗಳಿಗೆ ನೇರವಾಗಿ ಸಂಬಂಧಿಸಿದ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿದೆ.
ಇಷ್ಟಲ್ಲದೆ, 3.5 ಕಿಲೋಮೀಟರ್ ಉದ್ದದ ಗಡಿ ಗೋಡೆ, ಟ್ರಸ್ಟ್ ಕಚೇರಿ, ಅತಿಥಿ ಗೃಹ, ಸಭಾಂಗಣದ ಕಾಮಗಾರಿಗಳು ಮಾತ್ರ ಪ್ರಗತಿಯಲ್ಲಿವೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ರು. ರಸ್ತೆಗಳಿಗೆ ಕಲ್ಲು ಹಾಸುವುದು, ನೆಲಗಟ್ಟು ಮಾಡುವುದು, ಹಸಿರೀಕರಣಗೊಳಿಸುವುದು ಮತ್ತು 10 ಎಕರೆ ಪಂಚವಟಿಯನ್ನು ನಿರ್ಮಿಸುವ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಚಂಪತ್ ರಾಯ್ ಹೇಳಿದರು.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಅಶ್ಲೀಲ ವೀಡಿಯೋ FIR ದಾಖಲು :
==========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











