ಬ್ರೇಕಿಂಗ್ ನ್ಯೂಸ್
ಸುಳ್ಯ

‘ಬಣ್ಣ’ – 2026 : ಸತತ ಏಳನೇ ವರ್ಷದ ಮಕ್ಕಳ ಲೋಕದ ವಿನೂತನ ಶಿಬಿರ

ಸುಳ್ಯ : Tulu Times l ಬೇಸಿಗೆ ರಜೆ ಬಂದರೆ ಮಕ್ಕಳಿಗೆ ಸಂತೋಷದ ಕಾಲ. ಆದರೆ ಈ ಸಮಯವನ್ನು ಕೇವಲ ಆಟ, ಟಿವಿ ಅಥವಾ ಮೊಬೈಲ್‌ನಲ್ಲಿ ಕಳೆಯುವುದಕ್ಕಿಂತ ಉತ್ತಮವಾಗಿ ಬಳಸಿಕೊಳ್ಳಲು ‘ಬೇಸಿಗೆ ಶಿಬಿರ’ ಅತ್ಯುತ್ತಮ ಅವಕಾಶವಾಗಿದೆ. ಇವು ಮಕ್ಕಳಿಗೆ ಕಲಿಕೆ, ಮನರಂಜನೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಹಾಯಕವಾಗುತ್ತವೆ.

ಬೇಸಿಗೆ ರಜೆಯ ಸಮಯದಲ್ಲಿ ಶಾಲೆಗಳು, ಸಂಘಟನೆಗಳು ಅಥವಾ ಕ್ಲಬ್‌ಗಳು ನಡೆಸುವ ವಿಶೇಷ ತರಬೇತಿ ಮತ್ತು ಚಟುವಟಿಕೆಗಳ ಸಮೂಹವೇ ಬೇಸಿಗೆ ಶಿಬಿರ. ಇಲ್ಲಿ ಮಕ್ಕಳು ಹೊಸ ವಿಷಯಗಳನ್ನು ಕಲಿಯುತ್ತಾರೆ ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಶಿಬಿರದಲ್ಲಿರುವ ಅಷ್ಟೂ ದಿನ ಹೊಸ ವಿಷಯಗಳತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಇದೀಗ ಸುಳ್ಯದ ರಂಗಮಯೂರಿ ಕಲಾಶಾಲೆಯ ವತಿಯಿಂದ ನಡೆಯುವ ಮಕ್ಕಳ ರಾಜ್ಯ‌ಮಟ್ಟದ ಬೇಸಿಗೆ ಶಿಬಿರ ‘ಬಣ್ಣ-2026’, ಏಪ್ರಿಲ್ 13ನಿಂದ 21 ವರೆಗೆ ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಮಕ್ಕಳ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಬಣ್ಣ ಬಣ್ಣದ ರೆಕ್ಕೆಯನ್ನು ಕಟ್ಟಿ ಉತ್ತುಂಗಕ್ಕೆ ಏರಿಸುವ ಕಾರ್ಯ ಮಾಡಿಸುತ್ತಿರುವುದು, ಕಳೆದ ಎಂಟು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸುಳ್ಯದ ರಂಗಮಯೂರಿ ಕಲಾಶಾಲೆ ಸತತ ಏಳನೇ ವರ್ಷದ ಮಕ್ಕಳ ಹಬ್ಬದ ಸಂತಸದ ದಿನಕ್ಕಾಗಿ ಕಾಯುತ್ತಿದೆ.

ದೇಸೀಯ ಕಲೆಗಳ ಅನಾವರಣದೊಂದಿಗೆ ಮಕ್ಕಳ ಶಿಬಿರ :

ಈ ಬಾರಿಯ ಬೇಸಿಗೆ ಶಿಬಿರ‌ ಬಣ್ಣ – 2026ರ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ವಿಶೇಷವೆನ್ನುವಂತೆ ದೇಸೀಯ ಕಲೆಗಳ ಅನಾವರಣದೊಂದಿಗೆ ಮಕ್ಕಳ ಕನಸಿನ ‘ಬಣ್ಣ’ ಸಜ್ಜಾಗುತ್ತಿದೆ. ರಂಗ ತರಬೇತಿಯ ಜೊತೆಗೆ ಹಲವು ಶೈಲಿಯ ನಾಟಕ ಪ್ರಕಾರಗಳು ಉದಾ: ಐತಿಹಾಸಿಕ,‌ ಪೌರಾಣಿಕ, ಸಾಮಾಜಿಕ, ಶೈಲೀಕೃತ ನಾಟಕಗಳ ಕಲಿಕೆ, ಪ್ರದರ್ಶನ, ಜನಪದ ಹಾಡು, ನೃತ್ಯ, ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ..‌. ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು, ರಂಗಮಯೂರಿ ಶಿಕ್ಷಕರು, ವ್ಯವಸ್ಥಾಪಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಗಿರುತ್ತಾರೆ. ಅಲ್ಲದೇ, ಏಳರಿಂದ ಹದಿನೇಳು (07-17) ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ರಂಗಮಯೂರಿ ಕಲಾಶಾಲೆಯು ನಡೆಸುತ್ತಿರುವ ಬೇಸಿಗೆ ‌ಶಿಬಿರದಲ್ಲಿ ಪಾಲ್ಗೊಳ್ಳುವಂತೆ, ಕಾರ್ಯಕ್ರಮದ ಆಯೋಜಕರು‌ ಹಾಗೂ ನಿರ್ದೇಶಕರಾಗಿರುವ ಲೋಕೇಶ್ ಊರುಬೈಲ್ ತಿಳಿಸಿರುತ್ತಾರೆ.

ದಾಖಲಾತಿಗಾಗಿ ಮಾಹಿತಿ ;

ಏಪ್ರಿಲ್ 13 ರಿಂದ 21 (2026) ರವರೆಗೆ ಸುಳ್ಯದ ಕಾಯರ್ತೋಡಿ‌ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆಯಲಿರುವ ಶಿಬಿರದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 08, 2026 ರ ಒಳಗಾಗಿ, ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ. ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್‌ ಸಂಖ್ಯೆ : 9611355496 , 6363783983

‘Banna’ – 2026: Children’s World’s Innovative Camp for the Seventh Consecutive Year

ಇದನ್ನೂ ಓದಿ :ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=OcfeAEmDLkQiQp9U

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page