ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತೆಂಗಿನಕಾಯಿ ಬಾಕಿ ಹಣದ ವಿಚಾರಕ್ಕೆ ಗಲಾಟೆ : ಅನಾಹುತ ತಪ್ಪಿಸಿದ ಸ್ಥಳೀಯರು

ಉಡುಪಿ : Tulu Times l ಉಡುಪಿ ಜಿಲ್ಲೆಯ ಸಂತೇಕಟ್ಟೆ ಪ್ರದೇಶದಲ್ಲಿ ತೆಂಗಿನಕಾಯಿ ಬಾಕಿ ಹಣದ ವಿಚಾರವಾಗಿ ಎರಡು ನೆರೆಕರೆಯ ಅಂಗಡಿಗಳ ನಡುವೆ ಗಲಾಟೆ ಸಂಭವಿಸಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಂತೇಕಟ್ಟೆಯಲ್ಲಿ ಇರುವ ಒಂದು ಹಣ್ಣು ಅಂಗಡಿ ಮತ್ತು ಪಕ್ಕದ ಆಪ್ಟಿಕಲ್ ಅಂಗಡಿಯವರ ನಡುವೆ ಈ ಘಟನೆ ನಡೆದಿದೆ.

ಆಪ್ಟಿಕಲ್ಸ್ ಅಂಗಡಿಯ ಇಬ್ಬರು ವ್ಯಕ್ತಿಗಳು ಹಣ್ಣು ಅಂಗಡಿಯಿಂದ ನಿಯಮಿತವಾಗಿ ತೆಂಗಿನಕಾಯಿಗಳನ್ನು ಖರೀದಿಸುತ್ತಿದ್ದು, ಹಣವನ್ನು ನಂತರ ನೀಡುವುದಾಗಿ ಹೇಳುತ್ತಿದ್ದರು. ಹೀಗೆ ಬಾಕಿ ಮೊತ್ತ ಹೆಚ್ಚಾಗಿ ಸುಮಾರು 20 ತೆಂಗಿನಕಾಯಿಗಳ ಹಣ ಉಳಿದಿದೆ ಎಂದು ತಿಳಿದುಬಂದಿದೆ.

ಹಣ್ಣು ಅಂಗಡಿ ಮಾಲೀಕರು ಬಾಕಿ ಹಣವನ್ನು ಕೇಳಿದಾಗ ಮಾತಿನ ಚಕಮಕಿ ಆರಂಭವಾಗುತ್ತದೆ. ಬಳಿಕ ಗಲಾಟೆ ತೀವ್ರಗೊಂಡು ದೈಹಿಕ ತಳ್ಳಾಟಕ್ಕೆ ತಿರುಗಿತು. ಈ ವೇಳೆ, ಆಪ್ಟಿಕಲ್ ಅಂಗಡಿಯ ಮಹಿಳೆಯು ಹಣ್ಣು ಅಂಗಡಿಯಲ್ಲಿದ್ದ ಹಣ್ಣುಗಳನ್ನು ಹಾನಿಗೊಳಪಡಿಸಿದರೆಂದು ಆರೋಪಿಸಲಾಗಿದೆ.

ಗಲಾಟೆಯ ನಡುವೆ ಆಪ್ಟಿಕಲ್ ಅಂಗಡಿಯ ವ್ಯಕ್ತಿಯೊಬ್ಬನು ತೀಕ್ಷ್ಣವಾದ ವಸ್ತುವನ್ನು ಹಿಡಿದುಕೊಂಡಿರುವುದು ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಯಿತು. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಮಧ್ಯಪ್ರವೇಶಿಸಿ ಗಲಾಟೆಯನ್ನು ಶಮನಗೊಳಿಸಿದರು ಎನ್ನಲಾಗಿದೆ. ಆ ವ್ಯಕ್ತಿಯಿಂದ ತೀಕ್ಷ್ಣ ವಸ್ತುವನ್ನು ಕಸಿದುಕೊಂಡು, ಯಾವುದೇ ದೊಡ್ಡ ಅನಾಹುತ ಆಗಿರುವುದಿಲ್ಲ ಎಂದು ವರದಿಯಾಗಿದೆ. ಸಾಮಾನ್ಯ ಬಾಕಿ ಹಣದ ವಿಚಾರವೇ ದೊಡ್ಡ ಗಲಾಟೆಗೆ ತಿರುಗಿರುವುದು ಗಮನಾರ್ಹವಾಗಿದೆ. ಸ್ಥಳೀಯರ ತಕ್ಷಣದ ಹಸ್ತಕ್ಷೇಪದಿಂದ ಘಟನೆ ಮತ್ತಷ್ಟು ಗಂಭೀರವಾಗುವುದನ್ನು ತಡೆಯಲಾಗಿದೆ.

Ruckus over coconut dues: Locals avert disaster – ತುಳುಟೈಮ್ಸ್

ಇದನ್ನೂ ಓದಿ : ಗರ್ಭಾವಸ್ಥೆಯಲ್ಲಿ ಹೆಚ್ಚು ಕುಳಿತುಕೊಳ್ಳುವುದರಿಂದ ಅಪಾಯ: ಹೊಸ ಅಧ್ಯಯನದಿಂದ ಮಹತ್ವದ ಮಾಹಿತಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/Whjhsjm2Zao?si=nRoSUmY0dCDYqd5i

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page