ಆರೋಗ್ಯ : Tulu Times l ಗರ್ಭಿಣಿಯರು ದಿನವಿಡೀ ಹೆಚ್ಚು ಸಮಯ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ, ಸಣ್ಣ ಮಟ್ಟದ ಚಟುವಟಿಕೆಗಳನ್ನು ಹೆಚ್ಚಿಸಿದರೆ ಹೆಚ್ಚಿನ ರಕ್ತದೊತ್ತಡ ಸಮಸ್ಯೆಯ ಅಪಾಯವನ್ನು ಸುಮಾರು 30%ರವರೆಗೆ ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಅಧ್ಯಯನದಲ್ಲಿ ಏನು ಕಂಡುಬಂದಿದೆ?
18 ರಿಂದ 45 ವರ್ಷದೊಳಗಿನ 470 ಗರ್ಭಿಣಿಯರನ್ನು ಪರಿಶೀಲನೆ, ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಅವರ ಚಟುವಟಿಕೆಗಳ ವಿಶ್ಲೇಷಣೆ, ಸುಮಾರು 18.6% ಮಹಿಳೆಯರಿಗೆ ಗರ್ಭಧಾರಣೆಯ ಹೈಪರ್ ಟೆನ್ಶನ್ ಸಮಸ್ಯೆ ಕಂಡುಬಂದಿರುವುದು ವರದಿಯಾಗಿದೆ. ಅಲ್ಲದೇ, ಹೆಚ್ಚು ಸಮಯ ಕುಳಿತುಕೊಳ್ಳುವುದು ಅಪಾಯ ಹೆಚ್ಚಿಸುತ್ತದೆ. ದಿನವಿಡೀ ಸಣ್ಣ ಚಟುವಟಿಕೆ ಅಪಾಯ ಕಡಿಮೆ ಮಾಡುತ್ತದೆ ಹಾಗೂ ಕಠಿಣ ವ್ಯಾಯಾಮಕ್ಕಿಂತ ದಿನನಿತ್ಯದ ಚಟುವಟಿಕೆ ಮುಖ್ಯ ಎನ್ನಲಾಗಿದೆ.
ಅಧ್ಯಯನ ಪ್ರಕಾರ, 6 ಗಂಟೆ ಕುಳಿತುಕೊಳ್ಳುವುದು, 8 ಗಂಟೆ ಲಘು ಚಟುವಟಿಕೆ (ನಡೆದು ಹೋಗುವುದು, ಮನೆ ಕೆಲಸ), 4 ನಿಮಿಷ ತೀವ್ರ ಚಟುವಟಿಕೆ, 10 ಗಂಟೆ ವಿಶ್ರಾಂತಿ ಇತ್ಯಾದಿಗಳನ್ನು ಗರ್ಭಿಣಿ ಸ್ತ್ರೀಯರು ಅನುಸರಿಸುವುದು ಉತ್ತಮ ಎನ್ನಲಾಗಿದೆ. ದಿನಕ್ಕೆ 10 ಗಂಟೆಗೂ ಹೆಚ್ಚು ಕುಳಿತರೆ ಅಪಾಯ ಹೆಚ್ಚಾಗುತ್ತದೆ. 5 ಗಂಟೆಗಿಂತ ಕಡಿಮೆ ಚಟುವಟಿಕೆ ಇದ್ದರೂ ಅಪಾಯ ಹೆಚ್ಚಾಗುತ್ತದೆ.
ಗರ್ಭಿಣಿಯರು ಪಾಲಿಸಬೇಕಾದ ಸರಳ ಸಲಹೆಗಳು ;
ಪ್ರತಿ 30-60 ನಿಮಿಷಕ್ಕೆ ಒಮ್ಮೆ ಎದ್ದು ನಡೆದುಬನ್ನಿ, ಮನೆ ಕೆಲಸಗಳಲ್ಲಿ ಸಕ್ರಿಯವಾಗಿರಿ, ಫೋನ್‌ನಲ್ಲಿ ಮಾತನಾಡುವಾಗ ನಿಂತುಕೊಳ್ಳಿ, ಊಟದ ನಂತರ ಸ್ವಲ್ಪ ನಡೆದುಕೊಳ್ಳಿ, ದೀರ್ಘ ಸಮಯ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಉತ್ತಮ.
ಅಧ್ಯಯನವು, ಗರ್ಭಿಣಿಯರು ಕಠಿಣ ವ್ಯಾಯಾಮ ಮಾಡುವುದಕ್ಕಿಂತ ದಿನವಿಡೀ ಸಣ್ಣ ಚಟುವಟಿಕೆಗಳನ್ನು ಹೆಚ್ಚಿಸುವುದು ಮತ್ತು ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಅತ್ಯಂತ ಮುಖ್ಯವೆಂದು ತೋರಿಸಿದೆ. ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯವನ್ನು ಕಾಪಾಡಲು ಸಹಕಾರಿ ಎನ್ನಲಾಗಿದೆ.
Risk of sitting too much during pregnancy: Important information from new study – ತುಳುಟೈಮ್ಸ್
ಇದನ್ನೂ ಓದಿ :ಹೊಸ ಜೀವನಕ್ಕೆ ಬೆಳಕಾಗಿ ಬಂದ ರುಕ್ಮಿಣಿ ಭಾವನಾ ರಾಮಣ್ಣ !
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Whjhsjm2Zao?si=WeY2lKxwiZ6juNEl










