ಕರ್ನಾಟಕ : Tulu Times l ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಸಮೀಪಿಸುತ್ತಿರುವ ಈ ವೇಳೆಯಲ್ಲಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಉಚಿತ ಸಿಇಟಿ ಕ್ರ್ಯಾಶ್ ಕೋರ್ಸ್ ಯೋಜನೆಯನ್ನು ರದ್ದುಪಡಿಸಿದೆ. ಇದರ ಪರಿಣಾಮವಾಗಿ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಈಗ ಉಚಿತ ತರಬೇತಿ ಅವಕಾಶದಿಂದ ವಂಚಿತರಾಗಿದ್ದಾರೆ.
ಹಿಂದೆ ಕರ್ನಾಟಕ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆ ವತಿಯಿಂದ 30 ದಿನಗಳ ವಸತಿ ಕ್ರ್ಯಾಶ್ ಕೋರ್ಸ್, ಪ್ರತಿ ಜಿಲ್ಲೆಯ ಒಂದೇ ಶಾಲೆಯಲ್ಲಿ ತರಗತಿಗಳು, ವಿಜ್ಞಾನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಆದರೆ, ತಾಂತ್ರಿಕ ಅಡಚಣೆಗಳು ಮತ್ತು ಅನುಮೋದನೆ ವಿಳಂಬದಿಂದ ಯೋಜನೆ ಜಾರಿಗೆ ಬರಲಿಲ್ಲ.
ವಿದ್ಯಾರ್ಥಿಗಳಿಗೆ ಏನು ಪರಿಣಾಮ?
ಈಗ ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಅವಲಂಬನೆಯಾಗಬೇಕಾಗಿದ್ದು, ಸುಮಾರು ₹18,000 ವೆಚ್ಚದ 30 ದಿನಗಳ ಕೋರ್ಸ್, ಬಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಶಿಕ್ಷಕರ ಪ್ರಕಾರ, ಉಚಿತ ಪರ್ಯಾಯ ಇಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ತರಬೇತಿಗೆ ಹೋಗುತ್ತಿದ್ದಾರೆ. ಇದು ಬಡ ವಿದ್ಯಾರ್ಥಿಗಳನ್ನು ಹಿಂಬಾಗಕ್ಕೆ ತಳ್ಳುತ್ತಿದೆ ಎನ್ನಲಾಗಿದೆ.
ಸರ್ಕಾರ 2026-27ರಿಂದ ಹೊಸ ಮಾದರಿಯ ಸಿಇಟಿ ಕೋಚಿಂಗ್ ಪ್ರಾರಂಭಿಸಲು ಯೋಚಿಸಿದೆ: ಇದರಲ್ಲಿ ವರ್ಷಪೂರ್ತಿ ತರಬೇತಿ, ಪಿಯು ಪಠ್ಯಕ್ರಮದ ಜೊತೆಗೆ ಸಿಇಟಿ ತರಬೇತಿ, ಆನ್‌ಲೈನ್ ಮೂಲಕ ಪಾಠಗಳು, ಶಿಕ್ಷಕರಿಗೆ ವಿಶೇಷ ತರಬೇತಿ, ಈ ಯೋಜನೆಯಲ್ಲಿ DSERT Karnataka ಸಹಕಾರ ನೀಡಲಿದೆ ಎಂದು ವರದಿಯಾಗಿದೆ. ಕೆಸಿಇಟಿ ಕ್ರ್ಯಾಶ್ ಕೋರ್ಸ್ ರದ್ದಾದ ಪರಿಣಾಮವಾಗಿ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಉಂಟಾಗಿದೆ. ಸರ್ಕಾರದ ವರ್ಷಪೂರ್ತಿ ಕೋಚಿಂಗ್ ಯೋಜನೆ ಭವಿಷ್ಯದಲ್ಲಿ ಸಹಾಯ ಮಾಡಬಹುದು, ಆದರೆ ಪ್ರಸ್ತುತ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.
Cancellation of KCET free course: Increased burden on PU students – ತುಳುಟೈಮ್ಸ್
ಇದನ್ನೂ ಓದಿ : ಇಲ್ಲಿದೆ ನೋಡಿ ಮಾನವ ಸಹಾಯವಿಲ್ಲದೆ ನೇರವಾಗಿ ಸಿಲಿಂಡರ್ ಪಡೆಯುವ ವ್ಯವಸ್ಥೆ !
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=CmJtKSJ7ddiICl5p










