ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತುಮಕೂರಿನಲ್ಲಿ ಐತಿಹಾಸಿಕ ಕ್ಷಣವಾಗಲಿರುವ ಐಟಿಎಫ್ ಮೊದಲ ಮಹಿಳಾ ಟೆನ್ನಿಸ್ ಟೂರ್ನಿ

ಕರ್ನಾಟಕ : Tulu Times l ಕರ್ನಾಟಕದ ಟೆನ್ನಿಸ್ ಕ್ರೀಡಾಭಿವೃದ್ಧಿಗೆ ಮತ್ತೊಂದು ದೊಡ್ಡ ಉತ್ತೇಜನವಾಗಿ, ತುಮಕೂರು ನಗರದಲ್ಲಿ ಮೊದಲ ಬಾರಿಗೆ ಐಟಿಎಫ್ ಮಹಿಳಾ W35 ಟೆನ್ನಿಸ್ ಟೂರ್ನಿ ನಡೆಯಲಿದೆ. ಈ ಅಂತರರಾಷ್ಟ್ರೀಯ ಮಟ್ಟದ ಟೂರ್ನಿ ಮೇ 4ರಿಂದ 10ರವರೆಗೆ ತುಮಕೂರು ವಿಶ್ವವಿದ್ಯಾಲಯದ ಟೆನ್ನಿಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೂರ್ನಿಯ ವಿಶೇಷತೆಗಳು ;

* ಬಹುಮಾನ ಮೊತ್ತ: USD 30,000

 * 32 ಆಟಗಾರರ ಸಿಂಗಲ್ಸ್ ಮುಖ್ಯ ಡ್ರಾ

* ಅಂತರರಾಷ್ಟ್ರೀಯ ಮತ್ತು ಭಾರತೀಯ ಆಟಗಾರರ ಭಾಗವಹಿಸುವಿಕೆ ಹಾಗೂ ಈ ಟೂರ್ನಿ ಆಟಗಾರರಿಗೆ ಪ್ರೊಫೆಷನಲ್ ರ‍್ಯಾಂಕಿಂಗ್ ಪಾಯಿಂಟ್ ಗಳಿಸಲು ಅವಕಾಶ ನೀಡುತ್ತದೆ ಮತ್ತು ಮುಂದೆ WTA ಟೂರ್ ಕಡೆಗೆ ಸಾಗಲು ಸಹಕಾರಿಯಾಗಲಿದೆ.

ತುಮಕೂರಿಗೆ ಐತಿಹಾಸಿಕ ಮಹತ್ವ ;

ಈ ಟೂರ್ನಿ ತುಮಕೂರಿನಲ್ಲಿ ನಡೆಯುತ್ತಿರುವ ಮೊದಲ ಐಟಿಎಫ್ ಮಹಿಳಾ ಟೂರ್ನಿಯಾಗಿದೆ. ಕಳೆದ ಎರಡು ದಶಕಗಳ ನಂತರ ನಡೆಯುತ್ತಿರುವ ಪ್ರಮುಖ ಅಂತರರಾಷ್ಟ್ರೀಯ ಟೆನ್ನಿಸ್ ಸ್ಪರ್ಧೆ ಇದಾಗಿದ್ದು, 2003ರಲ್ಲಿ ಇದೇ ನಗರದಲ್ಲಿ ನಡೆದ ಎಟಿಪಿ ಚ್ಯಾಲೆಂಜರ್ (Tumkur Open) ನಂತರ ಇದು ದೊಡ್ಡ ಮಟ್ಟದ ಪಂದ್ಯಾವಳಿ ಆಗಿದೆ.

ಕರ್ನಾಟಕದ ಟೆನ್ನಿಸ್ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ;

ಬೆಂಗಳೂರು ಮತ್ತು ಕಲ್ಬುರ್ಗಿ ನಗರಗಳಲ್ಲಿ ಯಶಸ್ವಿಯಾಗಿ ಅಂತರರಾಷ್ಟ್ರೀಯ ಟೂರ್ನಿಗಳು ನಡೆದ ಬಳಿಕ, ಇದೀಗ ತುಮಕೂರು ಕೂಡ ಜಾಗತಿಕ ಟೆನ್ನಿಸ್ ನಕ್ಷೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದೆ. ಅಲ್ಲದೇ, ತುಮಕೂರಿನಲ್ಲಿ ನಡೆಯಲಿರುವ ಐಟಿಎಫ್ ಮಹಿಳಾ W35 ಟೂರ್ನಿ, ಕ್ರೀಡಾ ಕ್ಷೇತ್ರದಲ್ಲಿ ನಗರದ ಹೆಗ್ಗಳಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಕರ್ನಾಟಕದ ಟೆನ್ನಿಸ್ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಪ್ರಮುಖ ಹೆಜ್ಜೆಯಾಗಿದೆ.

ITF’s first women’s tennis tournament to be a historic moment in Tumkur – ತುಳುಟೈಮ್ಸ್

ಇದನ್ನೂ ಓದಿ :ಮಾರ್ಚ್ 21, 2026ರ ದಿನಭವಿಷ್ಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=K3u1cvDzSFp2mrzq

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page