ಮೆಗಾಸ್ಟಾರ್ ಚಿರಂಜೀವಿಗೆ ಡೀಪ್‌ಫೇಕ್ ಕಾಟ ಶುರುವಾಗಿದೆ. ಚಿರಂಜೀವಿ ಭಾವಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಲಾದ ಅಶ್ಲೀಲ ವೀಡಿಯೊಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಹಲವು ವೆಬ್‌ಸೈಟ್‌ಗಳ ವಿರುದ್ಧ ನಟ ದೂರು ದಾಖಲಿಸಿದ್ದಾರೆ.
ಹಲವು ವೆಬ್‌ಸೈಟ್‌ಗಳು ಚಿರಂಜೀವಿಯ, ಹೋಲಿಕೆ ಮತ್ತು ಚಿತ್ರವನ್ನು ಬಳಸಿಕೊಂಡು ಎಐ ಮೂಲಕ ಮಾರ್ಫಿಂಗ್ ಮಾಡಿ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿದ್ದಾರೆ. ನನ್ನನ್ನುಅಶ್ಲೀಲ ಕೃತ್ಯಗಳಲ್ಲಿ ತಪ್ಪಾಗಿ ಚಿತ್ರಿಸಿವೆ’ ಎಂಬ ಚಿರಂಜೀವಿ ದೂರಿನ ಮೇರೆಗೆ ಹೈದರಾಬಾದ್ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕೃತಕ ವೀಡಿಯೋಗಳು ತಮ್ಮ ಮೇಲೆ ತಪ್ಪು ಗ್ರಹಿಕೆ ಮೂಡಲು ಕಾರಣವಾಗಿದೆ. ನನ್ನ ಮೇಲಿರುವ ಸದ್ಭಾವನೆಯನ್ನು ವಿರೂಪಗಳಿಸುವ ದುರುದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ನಟ ಚಿರಂಜೀವಿ ಹೇಳಿಕೆ ನಿಡಿದ್ದಾರೆ. ಜೊತೆಗೆ ಈ ವೀಡಿಯೊಗಳು ಸಂಪೂರ್ಣವಾಗಿ ನಕಲಿಯಾಗಿದ್ದು, ಕೃತಕ ಎಐ ನಿರ್ಮಿತ, ಡೀಪ್‌ಫೇಕ್ ಅಶ್ಲೀಲತೆ ಬಳಸಿ ರಚಿಸಲಾಗಿದೆ. ನನ್ನ ಮುಖಭಾವವನ್ನು ಕಾನೂನುಬಾಹಿರವಾಗಿ ಅಶ್ಲೀಲ ವಿಷಯವಾಗಿ ಪರಿವರ್ತಿಸಲಾಗಿದೆ ಎಂದು ದೂರಿನಲ್ಲಿ ಚಿರಂಜೀವಿ ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಹೈದರಾಬಾದ್ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸೆಕ್ಷನ್ 67 ಮತ್ತು 670, ಭಾರತೀಯ ನ್ಯಾಯ ಸಂಹಿತೆ 79, 294, 296 ಮತ್ತು 336(4), ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : Ullal: ರಸ್ತೆ ದಾಟುತ್ತಿದ್ದಾಗ ಲಾರಿ ಢಿಕ್ಕಿ – ವ್ಯಕ್ತಿ ಮೃತ್ಯು
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











