ಕರ್ನಾಟಕ : Tulu Times l ಭಾರತದಲ್ಲಿ ಬಿರಿಯಾನಿಗೆ ವಿಶೇಷ ಸ್ಥಾನವಿದೆ. ಸುವಾಸನೆಯ ಅಕ್ಕಿ, ಮಸಾಲೆಗಳ ಮಿಶ್ರಣ ಮತ್ತು ರುಚಿಕರ ಮಾಂಸ ಅಥವಾ ತರಕಾರಿಗಳ ಸಂಯೋಜನೆಯಿಂದ ಬಿರಿಯಾನಿ ದೇಶದಾದ್ಯಂತ ಜನಪ್ರಿಯವಾಗಿದೆ. ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಶೈಲಿಯ ಬಿರಿಯಾನಿ ಇದ್ದರೂ, ಒಂದು ನಗರ ಮಾತ್ರ ‘ಬಿರಿಯಾನಿ ರಾಜಧಾನಿ’ ಎಂದು ಖ್ಯಾತಿ ಪಡೆದಿದೆ.
ಹೌದು….! ಭಾರತದ ಬಿರಿಯಾನಿ ರಾಜಧಾನಿ ಎಂದರೆ ಹೈದರಾಬಾದ್. ಈ ನಗರವು ತನ್ನ ಹೈದರಾಬಾದಿ ಬಿರಿಯಾನಿಗಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಸುವಾಸನೆಯ ಬಾಸುಮತಿ ಅಕ್ಕಿ, ಮಸಾಲೆಯ ಸಮತೋಲನ ಮತ್ತು ಚೆನ್ನಾಗಿ ಬೇಯಿಸಿದ ಮಾಂಸವು ಈ ಬಿರಿಯಾನಿಯ ವಿಶೇಷತೆಯಾಗಿದೆ.
ಬಿರಿಯಾನಿಯ ಮೂಲ ಪರ್ಷಿಯನ್ ಅಡುಗೆ ಪದ್ಧತಿಯಿಂದ ಬಂದಿದೆ ಎಂದು ನಂಬಲಾಗಿದೆ. ನಂತರ ಮೊಘಲರ ಕಾಲದಲ್ಲಿ ಇದು ಭಾರತಕ್ಕೆ ಬಂದು, ಸ್ಥಳೀಯ ಮಸಾಲೆಗಳು ಮತ್ತು ಅಡುಗೆ ವಿಧಾನಗಳೊಂದಿಗೆ ಬೆರೆತು ಹೊಸ ರೂಪ ಪಡೆದಿತು ಎನ್ನಲಾಗಿದೆ. ಹೈದರಾಬಾದ್ನಲ್ಲಿ ಬಿರಿಯಾನಿಯ ಅಭಿವೃದ್ಧಿಗೆ ಪ್ರಮುಖ ಕಾರಣ ಹೈದರಾಬಾದ್ ನ ನಿಜಾಮರು. ಇವರ ರಾಜಭವನದ ಅಡುಗೆಮನೆಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ವಿಶೇಷ ಶೈಲಿಯ ಬಿರಿಯಾನಿ ರೂಪುಗೊಂಡಿತು.
ಹೈದರಾಬಾದಿ ಬಿರಿಯಾನಿಯ ವಿಶೇಷತೆ ;
‘ದಂ’ ವಿಧಾನದಲ್ಲಿ ನಿಧಾನವಾಗಿ ಬೇಯಿಸುವುದು, ಅಕ್ಕಿ ಮತ್ತು ಮಾಂಸವನ್ನು ಒಂದೇ ಪಾತ್ರೆಯಲ್ಲಿ ಮುಚ್ಚಿ ಬೇಯಿಸುವುದು, ಕೇಸರಿ, ಫ್ರೈ ಮಾಡಿದ ಈರುಳ್ಳಿ ಮತ್ತು ಮಸಾಲೆಗಳ ಬಳಕೆ,ತೀವ್ರ ಸುವಾಸನೆ ಮತ್ತು ರುಚಿ ಇತ್ಯಾದಿಗಳು ಹೈದರಾಬಾದಿ ಬಿರಿಯಾನಿಯ ವಿಶೇಷತೆಯಾಗಿದೆ. ಬಿರಿಯಾನಿ ವಿಶೇಷತೆ ಏನೆಂದರೆ, ಮೊದಲು ರಾಜಮನೆತನದ ಆಹಾರವಾಗಿದ್ದ ಬಿರಿಯಾನಿಯು ಇಂದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಆನ್ಲೈನ್ ಫುಡ್ ಆರ್ಡರ್ಗಳಲ್ಲಿ ಸದಾ ಟಾಪ್ನಲ್ಲಿ ಇದ್ದೇ ಇರುತ್ತದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ರೂಪಗಳಲ್ಲಿ ಲಭ್ಯವಿದ್ದು, ಹೆಚ್ಚಿನ ಜನ ಇಷ್ಟ ಪಟ್ಟು ತಿನ್ನುತ್ತಾರೆ.
A food originating from royalty; popular all over the world – ತುಳುಟೈಮ್ಸ್
ಇದನ್ನೂ ಓದಿ : ಹೊಸ ಮೊಬೈಲ್ಗಳಲ್ಲಿ ಆಧಾರ್ ಆ್ಯಪ್ ಕಡ್ಡಾಯವೇ? ಸರ್ಕಾರದ ಯೋಜನೆಗೆ ವಿರೋಧ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=71UG99ziohb7_ZGX









