ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಳ: ಗ್ರಾಹಕರಿಗೆ ಹೆಚ್ಚುವರಿ ಭಾರ

ಜೊಮ್ಯಾಟೊ : Tulu Times l ಆನ್‌ಲೈನ್ ಆಹಾರ ವಿತರಣಾ ಸೇವೆಯಲ್ಲಿ ಪ್ರಮುಖ ಕಂಪನಿಯಾಗಿರುವ ಜೊಮ್ಯಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಮತ್ತೆ ಹೆಚ್ಚಿಸಿದೆ. ಪ್ರತಿಯೊಂದು ಆರ್ಡರ್‌ಗೆ ಈಗ ₹14.90 (GST ಹೊರತುಪಡಿಸಿ) ಶುಲ್ಕ ವಿಧಿಸಲಾಗುತ್ತಿದೆ. ಮೊದಲು ಇದು ₹12.50 ಆಗಿತ್ತು. ಹಳೆಯ ಶುಲ್ಕ: ₹12.50, ಹೊಸ ಶುಲ್ಕ: ₹14.90, ಹೆಚ್ಚಳ: ₹2.40 ಪ್ರತೀ ಆರ್ಡರ್‌ಗೆ ಎನ್ನಲಾಗಿದೆ. ಈ ಹೆಚ್ಚಳವು 2025ರ ಸೆಪ್ಟೆಂಬರ್ ನಂತರದ ಮತ್ತೊಂದು ದರ ಏರಿಕೆ ಆಗಿದೆ.

ಸ್ವಿಗ್ಗಿ ಕೂಡ ಈಗ ಸುಮಾರು ₹14.99 (GST ಸೇರಿ) ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸುತ್ತಿದೆ. ಸಾಮಾನ್ಯವಾಗಿ ಈ ಎರಡು ಕಂಪನಿಗಳು ಒಂದೇ ರೀತಿಯ ದರ ನೀತಿಯನ್ನು ಅನುಸರಿಸುತ್ತವೆ. ಇದು ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಾತ್ಮಕ ಒತ್ತಡವನ್ನು ಸೃಷ್ಟಿಸಬಹುದು ಎನ್ನಲಾಗಿದೆ. ಬೆಲೆ ಹೆಚ್ಚಳಕ್ಕೆ ಕಾರಣ ಏನು ಅಂತ ಕೇಳಿದ್ರೆ, ಇದಕ್ಕೆ ಮುಖ್ಯ ಕಾರಣ ಇಂಧನದ ಬೆಲೆ ಏರಿಕೆ, ಡೆಲಿವರಿ ವೆಚ್ಚ ಹೆಚ್ಚಳ, ಕಾರ್ಯಾಚರಣೆ ವೆಚ್ಚದ ಏರಿಕೆಗಳಾಗಿವೆ.

ಈ ಬದಲಾವಣೆಯಿಂದ ಬಳಕೆದಾರರಿಗೆ ಪ್ರತಿ ಆರ್ಡರ್‌ನ ಒಟ್ಟು ವೆಚ್ಚ ಹೆಚ್ಚಾಗಲಿದೆ. ಈಗಾಗಲೇ ಹಲವು ಹೆಚ್ಚುವರಿ ಶುಲ್ಕಗಳ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಗಮನ ಸೆಳೆದಿದೆ. ಆಹಾರ ವಿತರಣಾ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ನಡುವೆಯೇ, ಜೊಮ್ಯಾಟೊ ದರ ಏರಿಕೆ ಮಾಡಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತರಲಿದೆ ಎನ್ನಲಾಗಿದೆ.

Zomato platform fee hike: Additional burden on customers – ತುಳುಟೈಮ್ಸ್

ಇದನ್ನೂ ಓದಿ : ಬೇಸಿಗೆಯಲ್ಲಿ ಮೊಸರು ಬೇಗ ಹುಳಿ ಆಗುತ್ತಿದೆಯೇ? ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/mf_vvmo69Zs?si=ah4Xv6568ajeUFv5

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page