ಬೆಂಗಳೂರು: Tulu Times l ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿದ್ದು, ನಗರದಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಬೆಲೆ ಶಾಕ್ ಎದುರಾಗಿದೆ.
ಖಾಸಗಿ ಇಂಧನ ಕಂಪನಿ ‘ಶೆಲ್’, ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಹೆಚ್ಚಿಸಿದ್ದು, ಲೀಟರ್‌ಗೆ ₹2ರಿಂದ ₹2.50ರವರೆಗೆ ಏರಿಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಗ್ರಾಹಕರ ಮೇಲಿನ ವೆಚ್ಚ ತಕ್ಷಣವೇ ಹೆಚ್ಚಾಗಿದೆ. ಹೊಸ ದರಗಳ ಪ್ರಕಾರ, ಬೆಂಗಳೂರಿನ ಶೆಲ್ ಔಟ್ಲೆಟ್‌ಗಳಲ್ಲಿ ಪೆಟ್ರೋಲ್ ಬೆಲೆ ₹106ರಿಂದ ₹108.50ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಡೀಸೆಲ್ ದರ ₹91ರಿಂದ ₹93.50ಕ್ಕೆ ಹೆಚ್ಚಾಗಿದೆ.
ಪ್ರಸ್ತುತ ಈ ದರ ಏರಿಕೆ ಶೆಲ್ ಕಂಪನಿಯ ಮಟ್ಟಿಗೆ ಮಾತ್ರ ಸೀಮಿತವಾಗಿದ್ದರೂ, ಇತರೆ ಇಂಧನ ಕಂಪನಿಗಳೂ ದರ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ಸರ್ಕಾರಿ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕೂಡ ಶೀಘ್ರದಲ್ಲೇ ದರ ಪರಿಷ್ಕರಣೆ ಮಾಡುವ ನಿರೀಕ್ಷೆಯಿದೆ.
ಇಂಧನ ದರ ಏರಿಕೆಯ ಜೊತೆಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕೂಡ ಉಂಟಾಗಿದೆ. ಇದರಿಂದ ಹೋಟೆಲ್‌ಗಳು ಹಾಗೂ ಸಣ್ಣ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ. ಇಂಧನ ವೆಚ್ಚ ಏರಿಕೆ ಮತ್ತು ಅನಿಲ ಕೊರತೆ ಎರಡೂ ಸೇರಿ ವ್ಯಾಪಾರಿಗಳ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸಿವೆ. ಆರ್ಥಿಕ ತಜ್ಞರ ಪ್ರಕಾರ, ಮಧ್ಯಪ್ರಾಚ್ಯದ ಸಂಘರ್ಷ ಮುಂದುವರಿದರೆ ಕಚ್ಚಾ ತೈಲದ ಬೆಲೆಗಳು ಅಸ್ಥಿರವಾಗಿರಲಿದ್ದು, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
Bengaluru: Price shock for motorists from private fuel company – ತುಳುಟೈಮ್ಸ್
ಇದನ್ನೂ ಓದಿ : ಧುರಂಧರ್ – 2 ಸಿನೆಮಾ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ ನಟಿ ರಮ್ಯಾ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=CayfKeNuPxKUlbEt










