ಬೆಂಗಳೂರು: Tulu Times l ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ 2 ಚಿತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಈ ಚಿತ್ರ ನಿರೀಕ್ಷೆಗಳನ್ನು ಪೂರೈಸಲಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಧುರಂಧರ್ 2 ನೋಡಿದೆ. ಒಳ್ಳೆಯ ಆರಂಭವಿದ್ದ ವಿಷಯವನ್ನು ಹೇಗೆ ಬೋರು ಚಿತ್ರವಾಗಿ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆ, ಎಂದು ಅವರು ಟೀಕಿಸಿದ್ದಾರೆ. ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವ ಬದಲು, ಸಮಯ ಹಾಗೂ ಹಣ ವ್ಯರ್ಥ ಮಾಡಬೇಡಿ ಎಂದು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ.
ಚಿತ್ರದ ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಮತ್ತು ಅಭಿನಯ ಎಲ್ಲವೂ ಸರಾಸರಿಗಿಂತ ಕಡಿಮೆ ಮಟ್ಟದಲ್ಲಿವೆ ಎಂದು ರಮ್ಯ ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್ 19ರ ಬಿಡುಗಡೆಯ ಸಮಯಕ್ಕೆ ತಯಾರಿ ಸರಿಯಾಗಿಲ್ಲವೆಂಬ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಮೊದಲ ಭಾಗದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದರೆ, ಈ ಭಾಗದಲ್ಲಿ ನಿರಾಸೆ ಮಾತ್ರ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ನಟ ರಣವೀರ್ ಸಿಂಗ್ ಅವರ ಅಭಿನಯದ ಬಗ್ಗೆ ಸಹ ವ್ಯಂಗ್ಯವಾಗಿ ಟೀಕಿಸಿ, ಚಿತ್ರದಲ್ಲಿ ಅವರು ಏನು ಹೊತ್ತಿದ್ದಾರೆ ಎಂಬುದೇ ಸ್ಪಷ್ಟವಾಗಿಲ್ಲ, ಅವರ ಕೂದಲೇ ಹೆಚ್ಚು ಗಮನ ಸೆಳೆಯುತ್ತದೆ, ಎಂದು ಹೇಳಿದ್ದಾರೆ. ಚಿತ್ರದಲ್ಲಿ ಅತಿಯಾದ ಹಿಂಸಾಚಾರವನ್ನು ಕೂಡ ರಮ್ಯ ಖಂಡಿಸಿದ್ದಾರೆ. ವಿವಿಧ ವಸ್ತುಗಳನ್ನು ಆಯುಧಗಳಾಗಿ ಬಳಸಿರುವ ದೃಶ್ಯಗಳು ಅತಿರೇಕವಾಗಿದ್ದು, ಒಂದು ಹಂತದಲ್ಲಿ ಅದು ಭಯ ಹುಟ್ಟಿಸುವುದಕ್ಕಿಂತ ಹಾಸ್ಯಾಸ್ಪದವಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ, ಧುರಂಧರ್ 2 ದೊಡ್ಡ ಮಟ್ಟದ ನಿರಾಸೆ ತಂದಿದೆ ಎಂದು ಹೇಳಿರುತ್ತಾರೆ.
Actress Ramya expresses dissatisfaction with the movie Durandhar – 2 – ತುಳುಟೈಮ್ಸ್
ಇದನ್ನೂ ಓದಿ : ರಂಜಾನ್ ಹಬ್ಬದ ಆಚರಣೆ : ಭಕ್ತಿ, ಶಿಸ್ತು ಮತ್ತು ಸಹಭಾಗಿತ್ವದ ಸಂಭ್ರಮ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/mf_vvmo69Zs?si=nfAXn5d4XsL1HG_u










