ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಂಗಳೂರು–ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ 35 ದಿನ ಸೇವೆ ಸ್ಥಗಿತ

ಮಂಗಳೂರು : Tulu Times l ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಹೊರಬಂದಿದೆ. ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಟ್ರ್ಯಾಕ್ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ಪ್ಯಾಸೆಂಜರ್ ರೈಲುಗಳು ರದ್ದು‌ ;

ಮಂಗಳೂರು ಸೆಂಟ್ರಲ್ – ಸುಬ್ರಮಣ್ಯ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳು 35 ದಿನಗಳ ಕಾಲ ಸಂಪೂರ್ಣ ರದ್ದಾಗಲಿವೆ.

ರೈಲು ಸಂಖ್ಯೆ 56629 (ಮಂಗಳೂರು → ಸುಬ್ರಹ್ಮಣ್ಯ)

ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ → ಮಂಗಳೂರು) ಮಾರ್ಚ್ 23 ರಿಂದ ಏಪ್ರಿಲ್ 14 ಹಾಗೂ ಜೂನ್ 10 ರಿಂದ ಜೂನ್ 21ರವರೆಗೆ ರದ್ದಾಗಲಿವೆ.

ಕೆಲವು ಎಕ್ಸ್‌ಪ್ರೆಸ್ ರೈಲುಗಳಿಗೆ ಸುಮಾರು 20 ನಿಮಿಷ ತಡ:

ಯಶವಂತಪುರ – ಕಾರವಾರ (16515)

ಯಶವಂತಪುರ – ಮಂಗಳೂರು (16575, 16539)

ಇದೇ ವೇಳೆ, ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ (56229) ರೈಲು ಏಪ್ರಿಲ್ 21ರಿಂದ ಜೂನ್ 9ರವರೆಗೆ 55 ನಿಮಿಷ ತಡವಾಗಿ ಸಂಚರಿಸಲಿದೆ.

ಯುಗಾದಿ & ರಂಜಾನ್ ವಿಶೇಷ ರೈಲು‌;

ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲು ವ್ಯವಸ್ಥೆ:

ಯಶವಂತಪುರ → ಮಡಗಾಂವ್: ಮಾರ್ಚ್ 20, ಬೆಳಗ್ಗೆ 11:50

ಮಡಗಾಂವ್ → ಬೆಂಗಳೂರು ಕ್ಯಾಂಟೋನ್ಮೆಂಟ್: ಮಾರ್ಚ್ 22, ಬೆಳಗ್ಗೆ 11:00 ಈ ರೈಲು ಕುಣಿಗಲ್, ಹಾಸನ, Subramanya Road, ಉಡುಪಿ, ಕಾರವಾರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ಕಾರಣ ಪ್ರಯಾಣಿಕರು ಪ್ರಯಾಣಕ್ಕೂ ಮೊದಲು ರೈಲು ವೇಳಾಪಟ್ಟಿ ಪರಿಶೀಲಿಸಿ, ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಅನಾನುಕೂಲ ತಪ್ಪಿಸಬಹುದು.

Services on Mangalore-Subrahmanya rail route suspended for 35 days – ತುಳುಟೈಮ್ಸ್

ಇದನ್ನೂ ಓದಿ :ಯುಗಾದಿ ಸರ್ಪ್ರೈಸ್: ‘ಕಾಂತಾರ 2’ಗೆ ಸುಳಿವು ನೀಡಿದ ರಿಷಬ್ ಶೆಟ್ಟಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=1wR310I8oqn2JNb_

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page