ಕತಾರ್ : Tulu Times l ಮಧ್ಯಪ್ರಾಚ್ಯದ ಉದ್ವಿಗ್ನತೆ ನಡುವೆ, ರಾಸ್ ಲಫಾನ್ ಅನಿಲ ಘಟಕದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಈ ದಾಳಿಯ ಪರಿಣಾಮವಾಗಿ ಗ್ಯಾಸ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕತಾರ್ ವಿಶ್ವದ ಪ್ರಮುಖ ಅನಿಲ ಘಟಕ ಉತ್ಪಾದಕರಲ್ಲಿ ಒಂದಾಗಿದ್ದು, ದಾಳಿಯಿಂದ ಉತ್ಪಾದನೆ ನಿಂತು ಜಾಗತಿಕ ಸರಬರಾಜು ಸರಪಳಿಗೆ ಹೊಡೆತ ಬಿದ್ದಿದೆ. ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಭಾರೀ ಅಡ್ಡಿ ಮಾಡಿರುವುದರಿಂದ, 700ಕ್ಕೂ ಹೆಚ್ಚು ಕಾರ್ಗೋ ಹಡಗುಗಳು ಸಿಲುಕಿಕೊಂಡಿವೆ. ಇದರಿಂದ ಜಾಗತಿಕವಾಗಿ ಭಾರೀ ಹೊಡೆತ ಬೀಳಲಿದ್ದು, ಇಂಧನ ಬೆಲೆಗಳಲ್ಲಿ ಭಾರೀ ಏರಿಕೆ, ತೈಲ ಮತ್ತು ಗ್ಯಾಸ್ಸ್ ಸರಬರಾಜಿನಲ್ಲಿ ಅನಿಶ್ಚಿತತೆ ಹಾಗೂ ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಗಂಭೀರ ಹಂತವನ್ನು ತಲುಪುವಂತಿದೆ.
ಭಾರತದ ಮೇಲೆ ನೇರ ಪರಿಣಾಮ ಬೀರುತ್ತಿದೆ:
ಭಾರತ ತನ್ನ ಗ್ಯಾಸಿನ ಸುಮಾರು 50% ಅನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಸುಮಾರು 20% ಕತಾರ್ ನಿಂದ ಬರುತ್ತದೆ. ಹಾಗಾಗಿ, ಗ್ಯಾಸ್ ಕೊರತೆ ಉಂಟಾಗುವ ಸಾಧ್ಯತೆ, ಕೈಗಾರಿಕೆ ಮತ್ತು ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಹಾಗೂ ಗ್ಯಾಸ್ಸ್ ಬಳಕೆಯನ್ನು ಕಡಿಮೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಘಟನೆ ಕೇವಲ ಮಧ್ಯಪ್ರಾಚ್ಯದ ಸಮಸ್ಯೆಯಲ್ಲ. ಜಾಗತಿಕ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿದೆ. ಭಾರತದಂತ ಆಮದು ಅವಲಂಬಿತ ದೇಶಗಳಿಗೆ ಇದು ತಕ್ಷಣದ ಆರ್ಥಿಕ ಹಾಗೂ ಕೈಗಾರಿಕಾ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ.
Gas will become expensive in India: This is due to this attack by Iran!- ತುಳುಟೈಮ್ಸ್
ಇದನ್ನೂ ಓದಿ : ಜೀವನದ ಆಳವಾದ ಅರ್ಥ ತಿಳಿಸುವ ಹಬ್ಬ : ಯುಗಾದಿಗೆ ಶುಭಕೋರಿದ ಪ್ರಧಾನಿ ಮೋದಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=LF9lGtvRwRVJkbIz











