ವಾರಣಾಸಿ : Tulu Times l ಉತ್ತರ ಪ್ರದೇಶದ ವಾರಣಾಸಿಯ ಗಂಗಾ ನದಿಯಲ್ಲಿ ದೋಣಿಯ ಮೇಲೆ ಇಫ್ತಾರ್ ಕೂಟ ನಡೆಸಿ ಬಿರಿಯಾನಿ ಸೇವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದ ಮುಖ್ಯಸ್ಥ ರಜತ್ ಜೈಸ್ವಾಲ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಹೇಳಿರುವ ಪ್ರಕಾರ: ಗಂಗಾ ನದಿಯಲ್ಲಿ ದೋಣಿಯ ಮೇಲೆ ಇಫ್ತಾರ್ ಕೂಟ ಆಯೋಜನೆ ಮಾಡಿ, ಬಿರಿಯಾನಿ ಸೇವನೆ, ಉಳಿದ ಆಹಾರವನ್ನು ನದಿಗೆ ಎಸೆದ ಆರೋಪವಾಗಿರುತ್ತದೆ. ಗಂಗಾ ನದಿ ಹಿಂದೂ ಧರ್ಮದಲ್ಲಿ ಪವಿತ್ರವಾಗಿರುವುದರಿಂದ, ಈ ಕೃತ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿದ ಕಾಯ್ದೆಗಳು ;
ಪೊಲೀಸರು ಈ ಕೆಳಗಿನ ವಿಧಿಗಳಡಿ FIR ದಾಖಲಿಸಿದ್ದಾರೆ:
BNS 298 – ಪೂಜಾ ಸ್ಥಳದ ಅವಮಾನ
BNS 299 – ಧಾರ್ಮಿಕ ಭಾವನೆಗಳಿಗೆ ಧಕ್ಕೆ
BNS 196(1)(B) – ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವುದು
BNS 270, 279 – ಸಾರ್ವಜನಿಕ ಅಶಾಂತಿ ಮತ್ತು ನೀರು ಮಾಲಿನ್ಯ
Water (Prevention and Control of Pollution) Act, 1974
ಅಡಿಷನಲ್ ಪೊಲೀಸ್ ಕಮಿಷನರ್ ವಿಜಯ್ ಪ್ರತಾಪ್ ಸಿಂಗ್ ಅವರ ಪ್ರಕಾರ, ವೈರಲ್ ವಿಡಿಯೋ ಆಧರಿಸಿ ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಘಟನೆ ಸಾಮಾಜಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.
14 arrested for hosting Iftar party and consuming biryani on a boat on the Ganges river – ತುಳುಟೈಮ್ಸ್
ಇದನ್ನೂ ಓದಿ : ‘ಕೆಡಿ’ ಚಿತ್ರದ ಹಾಡು ವಿವಾದ: ನಿರ್ದೇಶಕ ಪ್ರೇಮ್ ಕ್ಷಮೆಯಾಚನೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=ix1CjqPmPgC_0uL2










