ಬೆಂಗಳೂರು : Tulu Times l ಐಪಿಎಲ್ ಆರಂಭಕ್ಕೂ ಮುನ್ನವೇ ದೊಡ್ಡ ಮಟ್ಟದ ಆನ್ಲೈನ್ ಟಿಕೆಟ್ ಮೋಸದ ಜಾಲ ಬೆಳಕಿಗೆ ಬಂದಿದೆ. ಐಪಿಎಲ್ ಪಂದ್ಯಗಳ ಟಿಕೆಟ್ ಹೆಸರಿನಲ್ಲಿ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಕ್ರಿಕೆಟ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ನಕಲಿ ಖಾತೆಗಳು ‘ಟಿಕೆಟ್ ಲಭ್ಯವಿದೆ’, ‘DM ಮಾಡಿ’ ಎಂಬ ಸಂದೇಶಗಳನ್ನು ಹಾಕಿ ಜನರನ್ನು ಆಕರ್ಷಿಸುತ್ತಿವೆ. ಆಸಕ್ತಿ ತೋರಿದ ಬಳಿಕ, ಹಣವನ್ನು ಮೊದಲು ವರ್ಗಾವಣೆ ಮಾಡುವಂತೆ ಕೇಳಿ ನಂತರ ಟಿಕೆಟ್ ಕಳುಹಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ಮೋಸವಾಗಿದ್ದು, ಜನರು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಲಕ್ಷಾಂತರ ನಕಲಿ ಖಾತೆಗಳು ;
ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಐಪಿಎಲ್ ದಿನಾಂಕಗಳು ಘೋಷಣೆಯಾದ ನಂತರ 1 ಲಕ್ಷಕ್ಕೂ ಹೆಚ್ಚು ನಕಲಿ ಖಾತೆಗಳು ನಿರ್ಮಾಣಗೊಂಡಿವೆ. ಈ ಖಾತೆಗಳು ಸಕ್ರಿಯವಾಗಿ ‘DM for tickets’ ಎಂಬ ರೀತಿಯ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿವೆ. ಪೊಲೀಸರು ಜನರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, ಅಪರಿಚಿತ ಖಾತೆಗಳ ಮೂಲಕ ಟಿಕೆಟ್ ಖರೀದಿ ಮಾಡಬೇಡಿ,ಸಾಮಾಜಿಕ ಜಾಲತಾಣಗಳಲ್ಲಿ ಹಣ ವರ್ಗಾವಣೆ ಮಾಡಬೇಡಿ, ಅಧಿಕೃತ ವೆಬ್ಸೈಟ್ ಅಥವಾ ಮಾನ್ಯ ಪ್ಲಾಟ್ಫಾರ್ಮ್ಗಳ ಮೂಲಕ ಮಾತ್ರ ಟಿಕೆಟ್ ಖರೀದಿಸಿ ಎನ್ನಲಾಗಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ವಿವಿಧ ಸೈಬರ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ, ಐಪಿಎಲ್ ಅವಧಿ ಮುಗಿಯುವವರೆಗೆ ನಿಗಾ ವಹಿಸಲು ಸೂಚಿಸಲಾಗಿದೆ. ಅಧಿಕಾರಿಗಳು ಈಗ ಟಿಕೆಟ್ ಸಂಬಂಧಿತ ಪೋಸ್ಟ್ಗಳನ್ನು ಹಾಕುತ್ತಿರುವ ಖಾತೆಗಳನ್ನು ಟ್ರ್ಯಾಕ್ ಮಾಡುತ್ತಿದ್ದು, ಅನುಮಾನಾಸ್ಪದ ಆನ್ಲೈನ್ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗಿದೆ.
Millions of fake accounts in the name of IPL: Be careful before getting tickets – ತುಳುಟೈಮ್ಸ್
ಇದನ್ನೂ ಓದಿ : ಬೆಂಗಳೂರಿನಲ್ಲಿ ಧೂಮಪಾನಿಗಳಿಗೆ ಡಬಲ್ ಶಾಕ್: ಬೆಲೆ ಏರಿಕೆ ಜೊತೆಗೆ ನಕಲಿ ಸಿಗರೇಟುಗಳ ಹಾವಳಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=G5e6prB0znxg-MFN










