ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

Uppinangady: ಹಾಡಹಗಲೇ ಅಂಗಡಿಗೆ ನುಗ್ಗಿ ಐದು ಲಕ್ಷ ದೋಚಿದ ಕಳ್ಳರು

Uppinangady: ಹಾಡಹಗಲೇ ಅಂಗಡಿಗೆ ನುಗ್ಗಿದ ಕಳ್ಳರು ಐದು ಲಕ್ಷದಷ್ಟು ಹಣ ಎಗರಿಸಿದ ಘಟನೆ ನಡೆದಿದೆ. ಉಪ್ಪಿನಂಗಡಿಯ ಗಾಂಧಿ ಪಾರ್ಕ್‌ ಬಳಿಯ ಅಡಿಕೆ ಮತ್ತು ಕಾಡುತ್ಪತ್ತಿ ಮಾರಾಟದ ಮಳಿಗೆಯಾದ ಗುಂಡಿಜೆ ಟ್ರೇಡರ್ಸ್‌ನಲ್ಲಿ ಕಳವು ನಡೆದಿದೆ.

ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಚೋರರು, ಡ್ರಾವರ್‌ ತೆರೆದು ಹಣ ದೋಚಿದ್ದಾರೆ. ಮಧ್ಯಾಹ್ನದ ವೇಳೆ ಅಂಗಡಿ ಮಾಲೀಕ ಶಟರ್‌ ಹಾಕದೇ ಇಟ್ಟು ಶೌಚಾಲಯಕ್ಕೆ ಹೋಗಿದ್ದಾರೆ. ಬರುವಾಗ ಬೀಗ ಹಾಕಿದ್ದ ಡ್ರಾವರ್‌ ಅನ್ನು ಮುರಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಈ ಅಂಗಡಿಯ ಒಳಗೆ ಸಿಸಿ ಕ್ಯಾಮಾರ ಇದ್ದು, ಅದಕ್ಕೆ ರಿಚಾರ್ಜ್‌ ಮಾಡಿಲ್ಲವಂತೆ. ಹೊರಗಿನ ಸಿಸಿ ಕ್ಯಾಮಾರಾದ ಸ್ವಿಚ್‌ ಕೂಡ ಕಡಿತಗೊಳಿದ್ದಾಗಿ ವರದಿಯಾಗಿದೆ. ಇದೇ ವಾಣಿಜ್ಯ ಸಂಕೀರ್ಣದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳನ್ನು ಬಾಡಿಗೆಗೆ ಕೊಡಲಾಗಿದೆ. ಆದರೆ ಒಂದೂ ಸಹ ಸಿಸಿ ಕ್ಯಾಮಾರಾ ಕೂಡ ಅಳವಡಿಸಿಲ್ಲ. ಇದನ್ನೆಲ್ಲಾ ಅರಿತುಕೊಂಡೇ ಕಳ್ಳರು ಕೈಚಳಕ ತೋರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಮ್ಮೂರಿನ ಸುದ್ದಿಗಳಿಗಾಗಿ ಸಂಪರ್ಕಿಸಿ: 7349258678

ಇದನ್ನೂ ಓದಿ: Puttur;ಪ್ರಚೋದನಕಾರಿ ಭಾಷಣ ಕೇಸ್ ಕಲ್ಲಡ್ಕ ಪ್ರಭಾಕರ ಭಟ್ ಗೆ ರಿಲೀಫ್

=============

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page