ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಆಸ್ಕರ್ ವೇದಿಕೆಯಲ್ಲಿ ‘ಅಭಿನಯ ಸರಸ್ವತಿ’ಗೆ ವಿಶೇಷ ಗೌರವ

ಆಸ್ಕರ್ ಅವಾರ್ಡ್: Tulu Times l 98ನೇ ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಸಮಾರಂಭವು ಈ ಬಾರಿ ಪ್ರಶಸ್ತಿಗಳ ಜೊತೆಗೆ ವಿವಾದಕ್ಕೂ ಕಾರಣವಾಯಿತು. ವಿಶೇಷವಾಗಿ ಇತ್ತೀಚೆಗೆ ನಿಧನರಾದ ವ್ಯಕ್ತಿಗಳನ್ನು ಗೌರವದಿಂದ ನೆನಪಿಸುವ  ವಿಭಾಗದಲ್ಲಿ ಕೆಲವು ಭಾರತೀಯ ಸಿನಿ ದಿಗ್ಗಜರ ಹೆಸರುಗಳು ನೇರ ಪ್ರಸಾರದಲ್ಲಿ ಕಾಣಿಸದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು.

ಪ್ರತೀ ವರ್ಷ ನಿಧನರಾದ ಕಲಾವಿದರಿಗೆ ಗೌರವ ಸಲ್ಲಿಸುವ ವಿಭಾಗದಲ್ಲಿ ಜಾಗತಿಕ ತಾರೆಯರಿಗೆ ಗೌರವ ಸಲ್ಲಿಸಲಾಯಿತು. ಆದರೆ ಭಾರತೀಯ ಸಿನಿ ದಿಗ್ಗಜರಾದ ಧರ್ಮೇಂದ್ರ, ಮನೋಜ್ ಕುಮಾರ್, ಬಿ ಸರೋಜಾ ದೇವಿ, ಕೋಟ ಶ್ರೀನಿವಾಸ ರಾವ್ ಇವರನ್ನು ನೇರಪ್ರಸಾರದಲ್ಲಿ ಒಳಪಡಿಸದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಭಾರತೀಯ ಸಿನೆಮಾಗೆ ದಶಕಗಳ ಸೇವೆ ಸಲ್ಲಿಸಿದ ಕಲಾವಿದರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾನ್ಯತೆ ಸಿಗಬೇಕಿತ್ತು ಎಂದು ಅಭಿಮಾನಿಗಳು ಪ್ರಶ್ನಿಸಿದರು. ವಿಶೇಷವಾಗಿ 2025ರ ನವೆಂಬರ್‌ನಲ್ಲಿ ನಿಧನರಾದ ಧರ್ಮೇಂದ್ರ ಅವರ ಗೈರು ಹಾಜರಾತಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ವಿವಾದ ಹೆಚ್ಚಾದ ಬಳಿಕ, ಅಕಾಡೆಮಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300ಕ್ಕೂ ಹೆಚ್ಚು ಕಲಾವಿದರ ವಿವರವಾದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಭಾರತೀಯ ದಿಗ್ಗಜರ ಹೆಸರುಗಳನ್ನೂ ಸೇರಿಸಲಾಗಿದೆ.

ಸರೋಜಾ ದೇವಿಗೆ ವಿಶೇಷ ಸ್ಮರಣೆ ;

‘ಅಭಿನಯ ಸರಸ್ವತಿ’ ಎಂದು ಖ್ಯಾತರಾದ ಬಿ. ಸರೋಜಾ ದೇವಿ ಅವರ ಸಾಧನೆಗಳನ್ನು ಈ ಪಟ್ಟಿಯಲ್ಲಿ ಸ್ಮರಿಸಲಾಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು 2025ರ ಜುಲೈನಲ್ಲಿ 87ನೇ ವಯಸ್ಸಿನಲ್ಲಿ ನಿಧನರಾದರು. ಜೊತೆಗೆ, ತೆಲುಗು ಚಿತ್ರರಂಗದ ಖ್ಯಾತ ನಟ ಕೋಟ‌ ಶ್ರೀನಿವಾಸ ರಾವ್ ಅವರನ್ನೂ ಸ್ಮರಿಸಲಾಗಿದ್ದು, ಅವರ ವೈವಿಧ್ಯಮಯ ಪಾತ್ರಗಳು ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿವೆ. ಒಟ್ಟಿನಲ್ಲಿ, ವಿವಾದದ ನಡುವೆಯೂ ಭಾರತೀಯ ಕಲಾವಿದರ ಸಾಧನೆಗಳನ್ನು ಅಂತಿಮವಾಗಿ ಗುರುತಿಸಿರುವುದು ಒಂದು ಮಟ್ಟಿಗೆ ಸಮಾಧಾನ ತಂದಿದೆ.

Special tribute to ‘Abhinaya Saraswati’ on the Oscar stage – ತುಳುಟೈಮ್ಸ್

ಇದನ್ನೂ ಓದಿ : ಚರ್ಮವನ್ನು ಆರೋಗ್ಯಕರವಾಗಿಡಲು ಗಮನಹರಿಸಿ : ಚರ್ಮ‌ ತಜ್ಞರು

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=KPGsZUrLQdLSb1Fh

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page