ಆರೋಗ್ಯ : Tulu Times l ಪ್ರಕೃತಿಯೇ ನೀಡಿರುವ ಅತ್ಯಂತ ಶುದ್ಧ ಹಾಗೂ ಅತ್ಯುತ್ತಮ ಪಾನೀಯಗಳಲ್ಲಿ ತೆಂಗಿನಕಾಯಿ ನೀರು ಕೂಡಾ ಒಂದು. ಇದು ದೇಹಕ್ಕೆ ತಾಜಾತನ ನೀಡುವುದರ ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಕುಡಿಯಬಹುದಾದ ಅತ್ಯುತ್ತಮ ಪಾನೀಯ ಇದಾಗಿದೆ. ಇದನ್ನು ಮಕ್ಕಳಿನಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ತಾಯಿ ಅಡುಗೆಮನೆಯಲ್ಲಿ ತೆಂಗಿನಕಾಯಿ ಒಡೆಯುವ ಶಬ್ದ ಕೇಳಿದ ತಕ್ಷಣ ಮಕ್ಕಳು, ಜೊತೆಗೆ ದೊಡ್ಡವರು ಕೂಡಾ ಗ್ಲಾಸ್ ತೆಗೆದುಕೊಂಡು ನೀರು ಕುಡಿಯೋದಿಕ್ಕೆ ರೆಡಿ ಆಗಿ ಬಿಡ್ತಾರೆ. ಹೀಗಿರುವಾಗ ಈ ತೆಂಗಿನಕಾಯಿ ನೀರನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ ಕೂಡಾ ಯಾವೆಲ್ಲಾ ಪ್ರಯೋಜನಗಳಿವೆ ಅಂತಾ ತಿಳ್ಕೊಳ್ಳೋಣ ಬನ್ನಿ.
ದೇಹದ ನೀರಿನ ಸಮತೋಲನ ಕಾಪಾಡುತ್ತದೆ ;
ಕಾಯಿ ನೀರು ದೇಹದ ಡಿಹೈಡ್ರೇಷನ್ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಎಲೆಕ್ಟ್ರೋಲೈಟ್‌ಗಳು ದೇಹದ ನೀರಿನ ಸಮತೋಲನವನ್ನು ಸರಿಯಾಗಿರಿಸುತ್ತವೆ.
ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ ;
ದಿನವಿಡೀ ದಣಿವು ಅನುಭವಿಸುವವರಿಗೆ ಕಾಯಿ ನೀರು ತಕ್ಷಣ ಶಕ್ತಿ ನೀಡುತ್ತದೆ. ಇದು ಸ್ವಾಭಾವಿಕ ಎನರ್ಜಿ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ ;
ಕಾಯಿ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಹೃದಯ ಆರೋಗ್ಯಕ್ಕೆ ಒಳ್ಳೆಯದು ;
ಇದಲ್ಲಿರುವ ಪೊಟ್ಯಾಸಿಯಂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ. ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚರ್ಮದ ಕಾಂತಿ ಹೆಚ್ಚಿಸುತ್ತದೆ ;
ನಿತ್ಯ ಕಾಯಿ ನೀರು ಕುಡಿಯುವುದರಿಂದ ಚರ್ಮ ಹೈಡ್ರೇಟ್ ಆಗಿ, ಕಾಂತಿ ಹೆಚ್ಚುತ್ತದೆ. ಮೊಡವೆ ಸಮಸ್ಯೆ ಕಡಿಮೆಯಾಗಲು ಸಹಾಯ ಮಾಡುತ್ತದೆ.
ತೂಕ ನಿಯಂತ್ರಣಕ್ಕೆ ಸಹಕಾರಿ ;
ಕಾಯಿ ನೀರು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ತೂಕ ಕಡಿಮೆ ಮಾಡಲು ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆ.
ಮೂತ್ರಪಿಂಡ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ;
ಮೂತ್ರಪಿಂಡಗಳಲ್ಲಿ ಕಲ್ಲು ಆಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲಿರುವ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಒಟ್ಟಿನಲ್ಲಿ, ಕಾಯಿ ನೀರು ಆರೋಗ್ಯಕರ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಬಹುದು. ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿಕೊಂಡರೆ ದೇಹಕ್ಕೆ ತಾಜಾತನ ಮತ್ತು ಆರೋಗ್ಯ ಎರಡನ್ನೂ ಪಡೆಯಬಹುದು.
Coconut water: an important part of a healthy lifestyle – ತುಳುಟೈಮ್ಸ್
ಇದನ್ನೂ ಓದಿ : ಮೊನಾಲಿಸಾ ಕುಟುಂಬದಲ್ಲಿ ಹೆಚ್ಚಿದ ಆತಂಕ : ಮಗಳನ್ನು ಸಂಪರ್ಕಿಸಲಾಗದೆ ಕಂಗಾಲಾದ ತಾಯಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=OZ9tjhXnWUKFxmXM











