ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕದಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ

ಬೆಂಗಳೂರು: Tulu Times l ರಾಜ್ಯದಾದ್ಯಂತ ನಾಳೆಯಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಗೆ ಈ ಬಾರಿ ಭಾರೀ ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 9,02,889 ವಿದ್ಯಾರ್ಥಿಗಳು 15,941 ಹೈಸ್ಕೂಲ್‌ಗಳಿಂದ ಪರೀಕ್ಷೆಗೆ ಹೆಸರು ನೋಂದಾಯಿಸಲಾಗಿದೆ.

ಮೊದಲ ಭಾಷಾ ಪರೀಕ್ಷೆಯಿಂದ ಆರಂಭ ;

ಪರೀಕ್ಷೆಗಳು ನಾಳೆ ಮೊದಲ ಭಾಷಾ ವಿಷಯದಿಂದ ಪ್ರಾರಂಭವಾಗಲಿವೆ. ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ. ರಾಜ್ಯದಾದ್ಯಂತ 2,871 ಪರೀಕ್ಷಾ ಕೇಂದ್ರಗಳು ಸಜ್ಜಾಗಿವೆ.

ಕಟ್ಟುನಿಟ್ಟಿನ ಕ್ರಮಗಳು ;

ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ವೆಬ್‌ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ನಿಷೇಧ, ಭದ್ರತಾ ಸಿಬ್ಬಂದಿ ಮತ್ತು ಪರೀಕ್ಷಾ ಸಿಬ್ಬಂದಿಗೂ ಮೊಬೈಲ್ ಬಳಕೆ ನಿರ್ಬಂಧ. ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಮಾತ್ರ ಕ್ಯಾಮೆರಾ ಇಲ್ಲದ ಸರಳ ಮೊಬೈಲ್ ಬಳಕೆಗೆ ಅನುಮತಿ.

ಡ್ರೆಸ್ ಕೋಡ್ ಕಡ್ಡಾಯ ;

ವಿದ್ಯಾರ್ಥಿಗಳು ತಮ್ಮ ಶಾಲೆಯ ನಿಯಮಾನುಸಾರ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಂತೆ ನಿಗದಿಪಡಿಸಿದ ಉಡುಪು ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳು ಉಚಿತ ಬಸ್ ಸೇವೆ ಒದಗಿಸಲಿವೆ. ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್ ಮತ್ತು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

SSLC exams in Karnataka from tomorrow: Over 9 lakh students expected to participate – ತುಳುಟೈಮ್ಸ್

ಇದನ್ನೂ ಓದಿ : ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ: ಬಯೋಮೆಟ್ರಿಕ್ ದೃಢೀಕರಣ ಕುರಿತು ಕೇಂದ್ರದ ಸ್ಪಷ್ಟನೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/B1QF8L9fyqM?si=5zqERH1o5DPQfWN9

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page