ಮಂಗಳೂರು : Tulu Times l ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಡ್ರೋನ್ ದಾಳಿಯ ಹಿನ್ನೆಲೆದಲ್ಲಿ ಕರ್ನಾಟಕದಿಂದ ಗಲ್ಫ್ ದೇಶಗಳಿಗೆ ನಡೆಯುತ್ತಿದ್ದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಹಲವು ವಿಮಾನಗಳನ್ನು ರದ್ದುಪಡಿಸಲಾಗಿದ್ದು, ಅನೇಕ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಮಂಗಳೂರಿನಿಂದ ಗಲ್ಫ್ ದೇಶಗಳಿಗೆ ವಿಮಾನ ರದ್ದು ;
ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ, ದಮ್ಮಾಮ್ ಮತ್ತು ಅಬುಧಾಬಿಗೆ ಹೊರಡುವ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದುಬೈ ವಿಮಾನ ನಿಲ್ದಾಣದ ಬಳಿ ಭದ್ರತಾ ಆತಂಕ ಉಂಟಾದ ಹಿನ್ನೆಲೆಯಲ್ಲಿ ಯುಎಇ ವಿಮಾನಯಾನ ಅಧಿಕಾರಿಗಳು ಕೆಲಕಾಲ ವಿಮಾನ ಸಂಚಾರವನ್ನು ನಿಲ್ಲಿಸಿದ್ದರು.
ಈ ಹಿನ್ನೆಲೆದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ನಿಗದಿತ ವಿಮಾನ ಸೇವೆಗಳನ್ನು ನಾಳೆ ದಿನ (ಮಾ.16) ರಂದು ಘಟನೆ ಪರಿಣಾಮವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಒಟ್ಟು 24 ವಿಮಾನಗಳು ರದ್ದು ಆಗಿವೆ. ಬೆಂಗಳೂರಿನಿಂದ ಹೊರಡುವ 11 ವಿಮಾನಗಳು
ಗಲ್ಫ್ ದೇಶಗಳಿಂದ ಬರಬೇಕಿದ್ದ 13 ವಿಮಾನಗಳು
ರದ್ದುಪಡಿಸಲಾದ ವಿಮಾನಗಳಲ್ಲಿ ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಮತ್ತು ದೋಹಾದಿಂದ ಬೆಂಗಳೂರಿಗೆ ಬರಬೇಕಿದ್ದ ಸೇವೆಗಳು ಸೇರಿವೆ.
ಪ್ರಯಾಣಿಕರಿಗೆ ತೊಂದರೆ ;
ಘಟನೆಯ ಪರಿಣಾಮವಾಗಿ ಕರ್ನಾಟಕದ ಹಲವು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿದ್ದು, ಕೆಲವರು ತಮ್ಮ ಪ್ರಯಾಣ ಯೋಜನೆಗಳನ್ನು ಮರುನಿಗದಿಪಡಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ದುಬೈದಲ್ಲಿದ್ದ ಕೆಲವು ಪ್ರಯಾಣಿಕರೂ ತಮ್ಮ ಮುಂದಿನ ಪ್ರಯಾಣಕ್ಕಾಗಿ ಕಾಯಬೇಕಾಯಿತು.
ವಿಮಾನ ಕಂಪನಿಗಳು ಪ್ರಯಾಣಿಕರಿಗೆ ಬೇರೆ ದಿನಕ್ಕೆ ಉಚಿತವಾಗಿ ಟಿಕೆಟ್ ಮರುನಿಗದಿ ಮಾಡಿಕೊಳ್ಳುವ ಅಥವಾ ಸಂಪೂರ್ಣ ಹಣ ಮರಳಿ ಪಡೆಯುವ ಅವಕಾಶ ನೀಡಿವೆ. ಅಧಿಕಾರಿಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನಗಳ ನವೀಕೃತ ಸ್ಥಿತಿಯನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಯುಎಇ ಅಧಿಕಾರಿಗಳ ಭದ್ರತಾ ಸೂಚನೆಗಳ ಆಧಾರದಲ್ಲಿ ಮುಂದಿನ ವಿಮಾನ ಸಂಚಾರ ನಿರ್ಧಾರವಾಗಲಿದೆ ಎಂದು ತಿಳಿಸಲಾಗಿದೆ.
Drone attack near Dubai airport: Mangalore-Bengaluru flight traffic disrupted – ತುಳುಟೈಮ್ಸ್
ಇದನ್ನೂ ಓದಿ :ನಿರಂತರ ದಣಿವು, ಕೂದಲು ಉದುರುವುದು, ಇದಕ್ಕೆ ಕಾರಣ ವಿಟಮಿನ್ D ಕೊರತೆಯಾಗಿರಬಹುದೇ ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/-w1LT_jtV9U?si=TP3QCy5a156hhVSE










