ಆರೋಗ್ಯ : Tulu Times l ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವಿಕೆ ಬಹಳಷ್ಟು ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಪುರುಷರಲ್ಲಿ ಮೇಲ್ ಪ್ಯಾಟರ್ನ್ ಬಾಲ್ಡ್ನೆಸ್ ಕೂಡಾ ಬಹಳವಾಗಿ ಪರಿಣಾಮ ಬೀರುತ್ತದೆ. ಈಗ ಹೊಸ ಅಧ್ಯಯನೊಂದು ಕೂದಲು ಉದುರುವಿಕೆಗೆ ಹೊಟ್ಟೆಯ ಆರೋಗ್ಯ ಕೂಡ ಕಾರಣವಾಗಬಹುದು ಎಂಬ ಆಸಕ್ತಿದಾಯಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಭಾರತದಲ್ಲಿ ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಸಂಸ್ಥೆ 2024 ಮತ್ತು 2025ರ ನಡುವೆ ದೇಶದ ವಿವಿಧ ಭಾಗಗಳ ಸುಮಾರು 1.6 ಲಕ್ಷ ಭಾರತೀಯ ಪುರುಷರ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಿದೆ. ಅಧ್ಯಯನದಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ತೆಲಂಗಾಣ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ವೆಸ್ಟ್ ಬೆಂಗಾಲ್, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹತ್ತು ಪ್ರದೇಶಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ.
ಆಧುನಿಕ ಜೀವನಶೈಲಿಯ ಪರಿಣಾಮ ;
ಅಧ್ಯಯನದಲ್ಲಿ ಹೇಳಿರುವಂತೆ, ಈ ಸಮಸ್ಯೆಗೆ ಮುಖ್ಯ ಕಾರಣಗಳು ಆಧುನಿಕ ಜೀವನಶೈಲಿಯಲ್ಲಿವೆ. ಅವುಗಳಲ್ಲಿ: ಹೆಚ್ಚು ಪ್ರಮಾಣದಲ್ಲಿ ಪ್ರೋಸೆಸ್ಡ್ ಆಹಾರ ಸೇವನೆ, ಅಸ್ತವ್ಯಸ್ತವಾದ ಊಟದ ಸಮಯ, ಕಡಿಮೆ ನೀರು ಕುಡಿಯುವ ಅಭ್ಯಾಸ, ಒತ್ತಡದಿಂದ ಉಂಟಾಗುವ ಆಹಾರ ಸೇವನೆ ಇತ್ಯಾದಿಗಳು.
ಕೂದಲು ಉದುರುವಿಕೆಗೆ ಹೊಟ್ಟೆಯ ಆರೋಗ್ಯ ಹೇಗೆ ಕಾರಣ?
ತಜ್ಞರ ಪ್ರಕಾರ ಹೊಟ್ಟೆಯ ಆರೋಗ್ಯ ದುರ್ಬಲವಾದರೆ, ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ಕೂದಲ ಬೆಳವಣಿಗೆಗೆ ಅಗತ್ಯವಾದ ಪ್ರೊಟೀನ್, ಐರನ್, ಜಿಂಕ್ ಮತ್ತು ಬಿ ವಿಟಮಿನ್‌ಗಳು ಸರಿಯಾಗಿ ದೇಹಕ್ಕೆ ಸೇರುವುದಿಲ್ಲ. ಇದರಿಂದ ಕೂದಲು ದುರ್ಬಲವಾಗಿ ಉದುರುವಿಕೆ ಹೆಚ್ಚಾಗುತ್ತದೆ.
ಅಲ್ಲದೇ, ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ದೇಹದಲ್ಲಿ ನಿಧಾನವಾದ ಉರಿಯೂತ ಉಂಟುಮಾಡಿ ಕೂದಲ ಬೆಳವಣಿಗೆಯ ಚಕ್ರವನ್ನು ವ್ಯತ್ಯಯಗೊಳಿಸುತ್ತವೆ. ಇದರಿಂದ ಕೂದಲು ಬೆಳವಣಿಗೆ ನಿಧಾನವಾಗುತ್ತದೆ ಮತ್ತು ಉದುರುವಿಕೆ ಹೆಚ್ಚಾಗುತ್ತದೆ. ಒಟ್ಟಿನಲ್ಲಿ, ಈ ಅಧ್ಯಯನವು ಕೂದಲು ಉದುರುವಿಕೆ ಕೇವಲ ತಲೆಯ ಸಮಸ್ಯೆಯಲ್ಲ; ದೇಹದ ಒಳಗಿನ ಆರೋಗ್ಯಕ್ಕೂ ಸಂಬಂಧಿಸಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಆದ್ದರಿಂದ ಆರೋಗ್ಯಕರ ಆಹಾರ, ಸರಿಯಾದ ಜೀವನಶೈಲಿ ಮತ್ತು ಉತ್ತಮ ಜೀರ್ಣಕ್ರಿಯೆ ಕಾಪಾಡುವುದು ಕೂದಲ ಆರೋಗ್ಯಕ್ಕೂ ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.
Is there a link between hair loss in men and stomach health? – ತುಳು ಟೈಮ್ಸ್
ಇದನ್ನೂ ಓದಿ : ಮುಟ್ಟಿನ ರಜೆಯಿಂದ ಮಹಿಳೆಯರಿಗೆ ಉದ್ಯೋಗ ಸಿಗುವುದಿಲ್ಲ: ಸುಪ್ರೀಂ ಕೋರ್ಟ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/-PlvbIZDxfU?si=16u4zDqFh1_lBN_I










