ತಿರುವನಂತಪುರಂ: Tulu Times l ಕಳೆದ ವರ್ಷ ಮಹಾ ಕುಂಭಮೇಳ ವೇಳೆ ವೈರಲ್ ವಿಡಿಯೋ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದ ಯುವತಿ ಮೊನಾಲಿಸಾ ಇದೀಗ ತನ್ನ ಪ್ರಿಯಕರ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನದಲ್ಲಿ ಇಬ್ಬರೂ ಸರಳವಾಗಿ ಮದುವೆಯಾಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಫರ್ಮಾನ್ ಖಾನ್ ಯಾರು?
ಫರ್ಮಾನ್ ಖಾನ್ ಮೂಲತಃ ಉತ್ತರ ಪ್ರದೇಶ ರಾಜ್ಯದವರಾಗಿದ್ದು, ಪ್ರಸ್ತುತ ಪ್ರಾದೇಶಿಕ ಸಿನೆಮಾಗಳಲ್ಲಿ ನಟನಾಗಿ ಕೆಲಸ ಮಾಡುತ್ತಿರುವುದಾಗಿ ವರದಿಗಳು ತಿಳಿಸಿವೆ. ಅವರು ಕೆಲವು ಮಾಡೆಲಿಂಗ್ ಯೋಜನೆಗಳು ಹಾಗೂ ಚಿತ್ರರಂಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಪರಿಚಯದಿಂದ ಪ್ರೀತಿಗೆ ;
ಮೋನಾಲಿಸಾ ಮತ್ತು ಫರ್ಮಾನ್ ಖಾನ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಪೇಸ್ಬುಕ್ ಮೂಲಕ ಪರಿಚಯವಾಗಿದ್ದರು. ನಂತರ ಆ ಸ್ನೇಹ ನಿಧಾನವಾಗಿ ಪ್ರೀತಿಯಾಗಿ ಮಾರ್ಪಟ್ಟಿತು. ಫರ್ಮಾನ್ ಖಾನ್ ಹೇಳುವಂತೆ, ಮೊದಲಿಗೆ ಪ್ರಪೋಸ್ ಮಾಡಿದ್ದು ಮೊನಾಲಿಸಾ ಆಗಿದ್ದು, ಆರಂಭದಲ್ಲಿ ಅವರು ನಿರಾಕರಿಸಿದ್ದರೂ ನಂತರ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ.
ಪೊಲೀಸರಿಗೆ ಮನವಿ ;
ಮದುವೆಗೆ ಮುನ್ನ ಮೊನಾಲಿಸಾ ಕೇರಳ ಪೊಲೀಸರನ್ನು ಸಂಪರ್ಕಿಸಿ ತಮ್ಮ ಪ್ರಿಯಕರನೊಂದಿಗೆ ಬದುಕಲು ಹಾಗೂ ಮದುವೆಯಾಗಲು ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ತನ್ನ ತಂದೆ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಬೇರೆ ವ್ಯಕ್ತಿಯೊಂದಿಗೆ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು, ಮೊನಾಲಿಸಾ ಪ್ರಾಪ್ತ ವಯಸ್ಕಳಾಗಿರುವುದರಿಂದ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವ ಹಕ್ಕು ಇದೆ ಎಂದು ಹೇಳಿರುತ್ತಾರೆ.
Kumbh Mela’s ‘Mona Lisa’ gets married! Who is Farman Khan? How did their love story begin? – ತುಳುಟೈಮ್ಸ್
ಇದನ್ನೂ ಓದಿ :ಪ್ರತಿದಿನ ಹೊಟ್ಟೆ ಉಬ್ಬರವಿದೆಯೇ? ಜೀರ್ಣಕ್ರಿಯೆ ಸುಧಾರಿಸಲು ಈ ಸರಳ ವಿಧಾನ ಪಾಲಿಸಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/-PlvbIZDxfU?si=0CihzisnkM3HCFdP










