ಪುತ್ತೂರು : Tulu Times l ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 4,175 ಲೀಟರ್ ಡೀಸೆಲ್ ಅನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮಾರ್ಚ್ 9ರ ರಾತ್ರಿ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರಿಗೆ ಕಾಣಿಯೂರು ಗ್ರಾಮದ ಮುದಳ್ತಿಯಾರ್ ಪ್ರದೇಶದಲ್ಲಿರುವ ಮನೆ ಸಮೀಪದ ಶೆಡ್‌ನಲ್ಲಿ ಡೀಸೆಲ್ ನ್ನು ಡ್ರಮ್‌ಗಳು ಮತ್ತು ಕ್ಯಾನ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ದೊರಕಿತ್ತು.
ಇದರ ಆಧಾರದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಪರಿಶೀಲನೆ ವೇಳೆ ಜಗದೀಶ್ (35) ಎಂಬವರ ಮನೆ ಸಮೀಪದ ಶೆಡ್‌ನಲ್ಲಿ ಸುಮಾರು 200 ಲೀಟರ್ ಸಾಮರ್ಥ್ಯದ 20 ಡ್ರಮ್‌ಗಳು ಮತ್ತು 35 ಲೀಟರ್ ಸಾಮರ್ಥ್ಯದ ಐದು ಕ್ಯಾನ್ ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಸಂಗ್ರಹಿಸಲಾಗಿತ್ತು. ಸ್ಥಳದಲ್ಲೇ ಹಲವು ಖಾಲಿ ಡ್ರಮ್‌ಗಳು, ಕ್ಯಾನ್ ಗಳು ಮತ್ತು ಇತರ ಸಾಮಗ್ರಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಡೀಸೆಲ್ ಹಾಗೂ ಇತರ ವಸ್ತುಗಳ ಒಟ್ಟು ಮೌಲ್ಯವನ್ನು ಸುಮಾರು ₹3.5 ಲಕ್ಷ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಪ್ರಮಾಣದ ಡೀಸೆಲ್ ಸಂಗ್ರಹಿಸಲು ಅಗತ್ಯವಾದ ಪರವಾನಗಿ ಅಥವಾ ಅನುಮತಿ ಬಗ್ಗೆ ಕೇಳಿದಾಗ ಜಗದೀಶ್ ಯಾವುದೇ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಡೀಸೆಲ್ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Puttur: 4,175 liters of diesel illegally stored in Kaniyur seized – ತುಳುಟೈಮ್ಸ್
ಇದನ್ನೂ ಓದಿ :ಭಾರತದಲ್ಲಿ ವಿಮಾನ ಸೇವೆ ಆರಂಭಿಸಲು ವಿದೇಶಿ ಏರ್‌ಲೈನ್ಸ್‌ಗೆ ಹೊಸ ನಿಯಮ ಜಾರಿ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/c0QMuTqAAIM?si=-U57qaFrFbn83i89











