ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕದ ಇತರೆ ಜಿಲ್ಲೆಗಳಲ್ಲೂ ಕಂಬಳ ನಡೆಸಲು ಅವಕಾಶ: ಅರ್ಜಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

ನವದೆಹಲಿ: Tulu Times l ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಹೊರತುಪಡಿಸಿ ಕರ್ನಾಟಕದ ಇತರೆ ಭಾಗಗಳಲ್ಲೂ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿ ಹಾಕಿದೆ.

ಕಂಬಳ ಎಂಬುದು ಕರ್ನಾಟಕದಲ್ಲಿ ನವೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ನಡೆಯುವ ಪರಂಪರೆಯ ಕ್ರೀಡೆಯಾಗಿದ್ದು, ಜೋಡಿ ಕೋಣಗಳನ್ನು ಹೊಲದ ಹದವಾದ ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಿಸುವ ಸ್ಪರ್ಧೆಯಾಗಿರುತ್ತದೆ. ಈ ಸ್ಪರ್ಧೆಯಲ್ಲಿ ವೇಗವಾಗಿ ಓಡಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿತು. ಪ್ರಾಣಿಗಳ ಹಕ್ಕುಗಳ ಪರ ಕೆಲಸ ಮಾಡುವ People for the Ethical Treatment of Animals ಸಂಸ್ಥೆ ಈ ಅರ್ಜಿಯನ್ನು ಸಲ್ಲಿಸಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಕಂಬಳ ನಡೆಸುವುದನ್ನು ತಡೆಯುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಆದರೆ 2023ರ ನವೆಂಬರ್ 14ರಂದು ಕರ್ನಾಟಕ ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.‌ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು, ‘ಒಂದು ಪ್ರದೇಶದ ಸಂಸ್ಕೃತಿಯನ್ನು ರಾಜ್ಯದ ಇತರೆ ಭಾಗಗಳಲ್ಲೂ ಪ್ರದರ್ಶಿಸಲು ಏನು ತಪ್ಪಿದೆ? ಜನರು ರಾಜ್ಯದ ಬೇರೆ ಭಾಗಗಳಲ್ಲೂ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲಿ. ಅದನ್ನು ಏಕೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು? ಎಂದು ಪ್ರಶ್ನಿಸಿದರು. ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರ್ಕಾರವು ಹಿಂದಿನ ಅಫಿಡವಿಟ್‌ನಲ್ಲಿ ಕಂಬಳವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಂಪರೆಯ ಕ್ರೀಡೆ ಎಂದು ಹೇಳಿತ್ತು. ‘ಬೆಂಗಳೂರು ಮುಂತಾದ ಪ್ರದೇಶಗಳಿಗೆ ಇದಕ್ಕೆ ಸಂಬಂಧ ಇಲ್ಲ,’ ಎಂದು ಅವರು ವಾದಿಸಿದರು.

2023ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಸಂವಿಧಾನ ಪೀಠವು ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಎಮ್ಮೆಗಾಡಿ ಓಟ ಮತ್ತು ಕರ್ನಾಟಕದ ಕಂಬಳ ಕ್ರೀಡೆಗಳಿಗೆ ಅವಕಾಶ ನೀಡಿದ ತಿದ್ದುಪಡಿ ಕಾನೂನುಗಳನ್ನು ಮಾನ್ಯವೆಂದು ಘೋಷಿಸಿತ್ತು.‌ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆ ಪೊಂಗಲ್ ಹಬ್ಬದ ಅಂಗವಾಗಿ ಆಚರಿಸಲಾಗುತ್ತದೆ. ಒಟ್ಟಿನಲ್ಲಿ, ಕರ್ನಾಟಕದ ವಿವಿಧ ಭಾಗಗಳಲ್ಲೂ ಕಂಬಳ ಆಯೋಜನೆಗೆ ಅವಕಾಶ ನೀಡಿರುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ತಳ್ಳಿ ಹಾಕಿರುತ್ತದೆ.

Supreme Court dismisses petition allowing Kambala to be held in other districts of Karnataka – ತುಳುಟೈಮ್ಸ್

ಇದನ್ನೂ ಓದಿ : ಅರ್ಷದೀಪ್ ಸಿಂಗ್‌ಗೆ ಕ್ರಿಕೆಟ್ ಮಂಡಳಿಯಿಂದ ದಂಡ: ಕಾರಣವೇನು?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=zWvQcRkzVeDRXtG5

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page