Bengaluru: ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜಕೀಯ ದುರುದ್ದೇಶದಿಂದ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮ ಪಂಚಾಯತ್ ಸದಸ್ಯ ಸಲೀಂ ಗುಂಡಿನ ದಾಳಿಗೆ ಒಳಗಾದವರು. ಸಂಬಂಧಿಯ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ. ದಾಳಿಯಲ್ಲಿ ಸಲೀಂ ಕೈಗೆ ಗಂಭೀರ ಗಾಯವಾಗಿದ್ದು, ಕೂಡಲೇ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನಾ ಸ್ಥಳಕ್ಕೆ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖಾಸಗಿ ಆಸ್ಪತ್ರೆ ಬಳಿ ಪೊಲೀಸರು ಬಿಗಿ ಭದ್ರತೆಯನ್ನು ನಿಯೋಜಿಸಿದ್ದು, ರಾಜಕೀಯ ದ್ವೇಷಕ್ಕೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸಲೀಂ ಸಂಬಂಧಿಕರು ಇದು ರಾಜಕೀಯ ದುರುದ್ದೇಶದಿಂದ ನಡೆದಿರುವ ದಾಳಿ ಎಂದಿದ್ದಾರೆ. ಇನ್ನು ಬೈಕ್ನಲ್ಲಿ ಬಂದಿದ್ದ ಅಪರಿಚಿತರು, ಮುಬಾರಕ್ ಪಾಷಾ ಕಡೆಯವನು ಎಂದು ಪೈರಿಂಗ್ ಮಾಡಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಮುಬಾರಕ್ ಪಾಷಾ ಎಂಬಾತ ಗ್ರಾ. ಪಂ ಸದಸ್ಯ ಸಲೀಂ ಎಂಬವರಿಗೆ ವಿರುದ್ಧವಾಗಿದ್ದ. 2020ರಲ್ಲಿ ನಡೆದ ಚುನಾವಣೆಯಲ್ಲಿ ಮುಬಾರಕ್ ಪಾಷಾ ಎಂಬಾತನನ್ನು ಸೊಲೀಸಿ ವಿಜಯಶಾಲಿಗಿದ್ದರು. ಗ್ರಾ.ಪಂ. ಚುನಾವಣೆ ಆದ ಮೂರೇ ತಿಂಗಳಿಗೆ ಮುಬಾರಕ್ ದಾಳಿ ಮಾಡಿದ್ದ. ಮುಬಾರಕ್ ಪಾಷಾ ಒಬ್ಬ ರೌಡಿ ಆಗಿದ್ದು ಆತನ ಮೇಲೆ ಕೊಲೆ ಕೇಸ್‌ಗಳಿವೆ. ಸಲೀಂಗೆ ಶೂಟ್ ಮಾಡ್ತೀನಿ ಅಂತ ಹೇಳಿಕೊಂಡು ಪಾಷಾ ಓಡಾಡುತ್ತಿದ್ದನಂತೆ. ಮುಬಾರಕ್, ಇಮ್ರಾನ್, ಚೋಟು ಸೇರಿ ಹಲವರ ಮೇಲೆ ಅನುಮಾನ ವ್ಯಕ್ತವಾಗಿದೆ.
.
ಗ್ರಾ.ಪಂ ಸದಸ್ಯನ ಮೇಲೆ ನಡೆದಿರುವ ಗುಂಡಿನ ದಾಳಿಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಗಾಯಗೊಂಡಿರುವ ಸಲೀಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸ್ಪರ್ಶ್ ಹಾಸ್ಪಿಟಲ್ಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಲೀಂ ಅವರ ಹೇಳಿಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Puttur: ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ
==================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











