ಬೆಂಗಳೂರು : Tulu Times l ಬೆಂಗಳೂರಿನಲ್ಲಿ ಮನೆಯಲ್ಲಿ ನಡೆದ ಜಗಳದ ಹಿನ್ನೆಲೆ 27 ವರ್ಷದ ಮಹಿಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕಾವ್ಯ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಕಾವ್ಯ ಅವರು ರಂಗಸ್ವಾಮಿ ಎಂಬವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ನಾಲ್ಕು ವರ್ಷದ ಮಗುವಿದೆ ಎನ್ನಲಾಗಿದೆ.
ಸಾಂಬಾರ್ ವಿಚಾರದಿಂದ ಆರಂಭವಾದ ಜಗಳ
ಮೂರು ದಿನಗಳ ಹಿಂದೆ ತಯಾರಿಸಿದ್ದ ಸಾಂಬಾರ್ ಅನ್ನು ಕಾವ್ಯ ಮರುಬಿಸಿ ಮಾಡಿ ಊಟಕ್ಕೆ ನೀಡಿದ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ವಾಗ್ವಾದ ಆರಂಭವಾಗಿದೆ. ಆರಂಭದಲ್ಲಿ ಮಾತಿನ ಚರ್ಚೆಯಾಗಿ ಶುರುವಾದ ಜಗಳ ಬಳಿಕ ತೀವ್ರ ವಾಗ್ವಾದಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಪತಿ ಕಾವ್ಯ ಅವರಿಗೆ ನಿಂದನೆ ಮಾಡಿದ್ದು, ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಕೀಟನಾಶಕ ಸೇವಿಸಿದ ಮಹಿಳೆ ;
ಜಗಳದ ನಂತರ ಮನೆಯಲ್ಲಿ ಕೃಷಿ ಬಳಕೆಗೆ ಇಡಲಾಗಿದ್ದ ಕೀಟನಾಶಕವನ್ನು ಕಾವ್ಯ ಸೇವಿಸಿದ್ದಾಳೆ ಎನ್ನಲಾಗಿದೆ. ಬಳಿಕ ಅಸ್ವಸ್ಥಗೊಂಡು ವಾಂತಿ ಆರಂಭವಾದ ಹಿನ್ನೆಲೆಯಲ್ಲಿ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಕಾವ್ಯ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Woman commits suicide after fight at home over sambar – ತುಳುಟೈಮ್ಸ್
ಇದನ್ನೂ ಓದಿ : ಮಾರ್ಚ್ 10ರಿಂದ ಬೆಂಗಳೂರು–ಮಂಗಳೂರು ನಡುವೆ ಲೇಟ್ ನೈಟ್ ವಿಮಾನ ಸೇವೆ ಆರಂಭ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/PtIikrbFeko?si=xSfZV8zNqM5QiICX










