ಸಿಂಧನೂರು : Tulu Times l ಸಿಂಧನೂರು ಸಮೀಪದ ಮುಕ್ಕುಂದ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿ ಸುಮಾರು 700ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮುಕ್ಕುಂದ ಗ್ರಾಮದ ನಿವಾಸಿ ವಿ. ಹೇಮಲತಾ ಮಧು ಅವರಿಗೆ ಸೇರಿದ ಮೇಕೆ ಶೆಡ್‌ನಲ್ಲಿ ಈ ದುರಂತ ಸಂಭವಿಸಿದ್ದು, ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ.
ಬೆಳಗಿನ ಜಾವ ಆರಂಭವಾದ ಬೆಂಕಿ ;
ಮಾಹಿತಿಯ ಪ್ರಕಾರ ಶುಕ್ರವಾರ ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಮೇಕೆ ಶೆಡ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಶೆಡ್‌ನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ಒಳಗೆ ಇದ್ದ ಮೇಕೆಗಳು ಹೊರಬರಲು ಸಾಧ್ಯವಾಗದೇ ಬೆಂಕಿಗೆ ಆಹುತಿಯಾಗಿವೆ. ಮೇಕೆ ಶೆಡ್ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಹಾಗೂ ಟ್ರೈಲರ್ ಕೂಡ ಬೆಂಕಿಗೆ ಆಹುತಿಯಾಗಿದ್ದು ಸಂಪೂರ್ಣ ಸುಟ್ಟುಹೋಗಿವೆ.
ಗ್ರಾಮಸ್ಥರ ಪ್ರಯತ್ನ ವಿಫಲ ;
ಈ ಘಟನೆ ಸಿಂಧನೂರು ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ.
ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೂ ಆಗಲೇ ಶೆಡ್ ಹಾಗೂ ಅದರೊಳಗಿನ ಮೇಕೆಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು.
ಅಧಿಕಾರಿಗಳ ಅಂದಾಜಿನ ಪ್ರಕಾರ ಈ ಅಗ್ನಿ ಅವಘಡದಿಂದ ಸುಮಾರು 2 ಕೋಟಿ ರೂ. ಗೂ ಅಧಿಕ ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Sindhanur: Massive fire disaster – over 700 goats die, loss of ₹2 crore
ಇದನ್ನೂ ಓದಿ : ನೀವು ಉಪಯೋಗಿಸುವ ಪನೀರ್ ನಿಜವಾದುದೇ ? ಮನೆಯಲ್ಲೇ ಪರೀಕ್ಷಿಸುವ ಸರಳ ವಿಧಾನ ಇಲ್ಲಿವೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/PtIikrbFeko?si=2elxubDm_tJmpEq9











