ಬ್ರೇಕಿಂಗ್ ನ್ಯೂಸ್
ದೇಶ

ಇರಾನ್ ಸಂಘರ್ಷದ ಪರಿಣಾಮ: ಭಾರತದ ವಜ್ರ–ಆಭರಣ ರಫ್ತು ಹಾಗೂ ಆಮದು ವ್ಯಾಪಾರಕ್ಕೆ ದೊಡ್ಡ ಹೊಡೆತ

ನವದೆಹಲಿ: Tulu Times l ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಸಂಬಂಧಿತ ಸಂಘರ್ಷವು ಭಾರತದ ವಜ್ರ ಹಾಗೂ ಆಭರಣ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಿಮಾನಗಳ ರದ್ದುಪಡಿಕೆ ಹಾಗೂ ಗಗನಮಾರ್ಗಗಳ ಮುಚ್ಚುವಿಕೆಯ ಪರಿಣಾಮವಾಗಿ ಭಾರತದಿಂದ ವಜ್ರ–ಆಭರಣಗಳ ರಫ್ತು ಹಾಗೂ ಕಚ್ಚಾ ವಜ್ರಗಳ ಆಮದು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿದೆ.

ವರದಿಗಳ ಪ್ರಕಾರ, ಮಧ್ಯಪ್ರಾಚ್ಯದ ಪ್ರಮುಖ ವ್ಯಾಪಾರ ಕೇಂದ್ರವಾದ ದುಬೈನಲ್ಲಿ ಅನೇಕ ಕಾರ್ಗೋ ಮತ್ತು ಪ್ರಯಾಣಿಕ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ವ್ಯಾಪಾರ ಸಾಗಣೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪ್ರಮುಖ ವಜ್ರ ರಫ್ತು ಕಂಪನಿಯಾದ ಏಷಿಯನ್ ಸ್ಟಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಫುಲ್ ಶಾ ಅವರು, “ಮಧ್ಯಪ್ರಾಚ್ಯದಿಂದ ರಫ್ತು ಮತ್ತು ಆಮದು ವ್ಯವಹಾರಗಳು ಈಗ ಬಹುತೇಕ ಸ್ಥಗಿತಗೊಂಡಿವೆ. ಸರಕು ಸಾಗಣೆಗೆ ಯಾವುದೇ ಲಾಜಿಸ್ಟಿಕ್ ವ್ಯವಸ್ಥೆ ಲಭ್ಯವಿಲ್ಲ,” ಎಂದು ಹೇಳಿದ್ದಾರೆ.

ಭಾರತದ ವಜ್ರ ಮತ್ತು ಆಭರಣಗಳ ಒಟ್ಟು ರಫ್ತು ಮೌಲ್ಯ ಸುಮಾರು 50 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲೂ ಸುಮಾರು ನಾಲ್ಕನೇ ಭಾಗ ಮಧ್ಯಪ್ರಾಚ್ಯ ಮಾರುಕಟ್ಟೆಗೆ ಹೋಗುತ್ತದೆ. ಭಾರತಕ್ಕೆ ಬರುವ ಕಚ್ಚಾ ವಜ್ರಗಳ ರಫ್ತಿನಲ್ಲಿ ಎರಡರಲ್ಲಿ ಎರಡುಭಾಗಕ್ಕಿಂತ  ಹೆಚ್ಚು ಪಾಲು ಯುಎಇಯಿಂದಲೇ ಬರುತ್ತದೆ. ಭಾರತವು ಜಗತ್ತಿನಲ್ಲೇ ಅತಿ ದೊಡ್ಡ ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಕೇಂದ್ರವಾಗಿದ್ದು, ವಿಶ್ವದಲ್ಲಿ ಸಂಸ್ಕರಣೆಯಾಗುವ 10 ವಜ್ರಗಳಲ್ಲಿ 9 ವಜ್ರಗಳು ಭಾರತದಲ್ಲೇ ಸಂಸ್ಕರಿಸಲಾಗುತ್ತವೆ ಎಂದು ವರದಿಗಳು ತಿಳಿಸಿವೆ.

ಮಾರ್ಚ್ ತಿಂಗಳಲ್ಲಿ ರಫ್ತು ಕುಸಿತ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ವ್ಯಾಪಾರ ವ್ಯತ್ಯಯ ಉಂಟಾದ ಕಾರಣದಿಂದ ಮಾರ್ಚ್ ತಿಂಗಳಲ್ಲಿ ಭಾರತದ ವಜ್ರ–ಆಭರಣ ರಫ್ತು ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ.

ದುಬೈ ಕೇವಲ ಪ್ರಮುಖ ಮಾರುಕಟ್ಟೆಯಷ್ಟೇ ಅಲ್ಲ, ವಜ್ರ ಉತ್ಪಾದಕ ರಾಷ್ಟ್ರಗಳು ಮತ್ತು ಪ್ರಮುಖ ಗ್ರಾಹಕ ರಾಷ್ಟ್ರಗಳ ನಡುವೆ ಮಧ್ಯವರ್ತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಅಲ್ಲಿನ ವ್ಯವಹಾರ ಅಸ್ತವ್ಯಸ್ತವಾದರೆ ಭಾರತದ ವಜ್ರ ವ್ಯಾಪಾರಕ್ಕೂ ನೇರ ಪರಿಣಾಮ ಉಂಟಾಗುತ್ತದೆ. ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಸಂಘರ್ಷವು ಭಾರತದ ವಜ್ರ ಮತ್ತು ಆಭರಣ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ರಫ್ತು ವ್ಯಾಪಾರದಲ್ಲಿ ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇದೆ.

Impact of Iran conflict: Big blow to India’s diamond and jewellery export and import trade – ತುಳುಟೈಮ್ಸ್

ಇದನ್ನೂ ಓದಿ : 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ: ಸಿಎಂ ಸಿದ್ದರಾಮಯ್ಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/PtIikrbFeko?si=C_fWi8iwhFjybSov

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 18

You cannot copy content of this page