ಪುತ್ತೂರು : Tulu Times l ಉಪ್ಪಿನಂಗಡಿ ಶ್ರೀ ಮಹತೋಭಾರ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಾಗಮಂಡಲ ಸೇವೆಯ ಆಮಂತ್ರಣ ಪತ್ರಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಮಾ.06 ರಂದು ಬಿಡುಗಡೆಗೊಳಿಸಲಾಯಿತು

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ನಾಗಮಂಡಲೋತ್ಸವ ಸಮಿತಿ ಉಪ್ಪಿನಂಗಡಿ ಇವರ ಆಶ್ರಯದಲ್ಲಿ ಉಪ್ಪಿನಂಗಡಿ ದೇವಸ್ಥಾನದ ವಠಾರದಲ್ಲಿ ಏಪ್ರಿಲ್ 05, 2026 ಆದಿತ್ಯವಾರ ಶ್ರೀಕೃಷ್ಣ ಪ್ರಸಾದ್ ವೈದ್ಯರ ನೇತೃತ್ವದಲ್ಲಿ ಚತುಃಪವಿತ್ರ ನಾಗಮಂಡಲವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಈ ಸಂದರ್ಭ ಸಂಜೆ ಗಂಟೆ 3ರಿಂದ ಖ್ಯಾತ ಗಾಯಕರಾದ ಅಜಯ ವಾರಿಯರ್ ಕೀರ್ತನ್ ಹೊಳ್ಳ ಮತ್ತು ಸಂಗೀತ ಬಾಲಚಂದ್ರ ತಂಡದವರಿಂದ ಭಕ್ತಿ-ಭಾವ ಸಂಗೀತೋತ್ಸವ ಕಾರ್ಯಕ್ರಮ ಜರುಗಲಿದೆ.
ಲೋಕಕಲ್ಯಾಣಾರ್ಥಕವಾಗಿ ನಡೆಯಲಿರುವ ಸೇವೆಯು ಭಕ್ತಾಧಿಗಳ ತನು-ಮನಗಳನ್ನು ನಿರ್ಮಲಗೊಳಿಸಲು, ನಾಗದೇವರ ನಾಗಮಂಡಲ ಸೇವೆಯೊಂದಿಗೆ ಪೂಜಿಸಿ, ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲು ಸರ್ವ ನಾಗದೋಷ ನಿವಾರಣೆಗಾಗಿ ಸರ್ವಭೀಷ್ಟಗಳನ್ನು ಈಡೇರಿಸಲೆಂದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಲು ಸಮಸ್ತ ಭಕ್ತರಿಗೆ
ಉಪ್ಪಿನಂಗಡಿ ನಾಗಮಂಡಲೋತ್ಸವ ಸಮಿತಿ ಸ್ವಾಗತವನ್ನು ಬಯಸುತ್ತಿದ್ದಾರೆ.
Sri Mahatobhara Sahasralingeshwar Temple Nagamandal Service Invitation Letter Released – ತುಳುಟೈಮ್ಸ್

ಇದನ್ನೂ ಓದಿ : ಮಾರ್ಚ್ 6, 2026 ರ ದಿನಭವಿಷ್ಯ: ಇಂದಿನ 12 ರಾಶಿಗಳ ಫಲ ಹೇಗಿದೆ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/PtIikrbFeko?si=iPGB4oYp7_GrFsJN











