ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೈಶಾಖ್ ವಿಜಯಕುಮಾರ್

ಬೆಂಗಳೂರು: Tulu Times l ಕರ್ನಾಟಕ ಹಾಗೂ ಭಾರತ ತಂಡದ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ವೈಶಾಖ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ಸಾಗರಿಕಾ ಅವರೊಂದಿಗೆ ಗುರುವಾರ (ಮಾರ್ಚ್ 5) ಬೆಂಗಳೂರಿನಲ್ಲಿ ವೈಭವಯುತವಾಗಿ ವಿವಾಹವಾದರು.

ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಕ್ರಿಕೆಟ್ ವಲಯದ ಅನೇಕ ಗಣ್ಯರು ಭಾಗವಹಿಸಿದ್ದರು. ಸಮಾರಂಭಕ್ಕೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಹಾಜರಾಗಿ ನವ ದಂಪತಿಗೆ ಶುಭಾಶಯ ಕೋರಿದರು.

1997ರ ಜನವರಿ 31ರಂದು ಬೆಂಗಳೂರಿನಲ್ಲಿ ಜನಿಸಿದ ವೈಶಾಖ್ ವಿಜಯಕುಮಾರ್ ಅವರ ಕ್ರಿಕೆಟ್ ಪಯಣ ಹೋರಾಟ ಮತ್ತು ದೃಢಸಂಕಲ್ಪದಿಂದ ಕೂಡಿದೆ. ಆರಂಭದಲ್ಲಿ ಅವರು ಬ್ಯಾಟ್ಸ್ಮನ್ ಆಗಿ ಕ್ರಿಕೆಟ್ ಜೀವನ ಆರಂಭಿಸಿದ್ದರು. ಅಷ್ಟೇ ಅಲ್ಲದೆ ಕರ್ನಾಟಕ ಅಂಡರ್-16 ತಂಡದ ನಾಯಕತ್ವವನ್ನೂ ವಹಿಸಿದ್ದರು. ವೈಶಾಖ್ ಅವರ ಕ್ರಿಕೆಟ್ ಪಯಣದಲ್ಲಿ ಅವರ ತಂದೆಯ ಪಾತ್ರವೂ ಮಹತ್ವದ್ದಾಗಿದೆ. ಮಗನ ಕ್ರಿಕೆಟ್ ಕನಸನ್ನು ಸಾಕಾರಗೊಳಿಸಲು ಅವರು ತಮ್ಮ ಉದ್ಯೋಗವನ್ನೇ ತ್ಯಜಿಸಿ ಬೆಂಬಲ ನೀಡಿದ್ದರು. ತಂದೆಯ ವಿಶ್ವಾಸಕ್ಕೆ ತಕ್ಕಂತೆ ವೈಶಾಖ್ ತಮ್ಮ ಪ್ರದರ್ಶನದ ಮೂಲಕ ಯಶಸ್ಸು ಸಾಧಿಸಿದ್ದಾರೆ.

2023ರಲ್ಲಿ ಅವರು ಐಪಿಎಲ್‌ಗೆ ಆರ್ ಸಿಬಿ ತಂಡದ ಮೂಲಕ ಪ್ರವೇಶಿಸಿದರು. ಆರಂಭದಲ್ಲಿ ನೆಟ್ ಬೌಲರ್ ಆಗಿದ್ದ ಅವರು ನಂತರ ಮುಖ್ಯ ತಂಡದಲ್ಲಿ ಅವಕಾಶ ಪಡೆದರು. ತಮ್ಮ ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅವರನ್ನು ₹1.80 ಕೋಟಿಗೆ ಖರೀದಿಸಿದ್ದು ಅವರ ಮೌಲ್ಯ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಇದೀಗ ವೈಯಕ್ತಿಕ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವೈಶಾಖ್ ಅವರಿಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ವಲಯದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.

Cricketer Vaishakh Vijayakumar enters married life – ತುಳುಟೈಮ್ಸ್

ಇದನ್ನೂ ಓದಿ : ಫೈಬರ್ ಆಹಾರ ಸೇವನೆಯಿಂದ ತೂಕ‌ ಇಳಿಕೆ ಸಾಧ್ಯ !

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/KpxF-TdEQqM?si=e34W8jzy37oSYXyL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page