ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: 11 ದಿನಗಳಿಂದ ಸಮುದ್ರದ ಮಧ್ಯೆ ಸಿಲುಕಿದ್ದ 31 ಮೀನುಗಾರರ ರಕ್ಷಣೆ

Mangaluru: ಗೋವಾದಿಂದ ನಾಪತ್ತೆಯಾಗಿದ್ದ 31 ಮೀನುಗಾರರನ್ನು ಹೊಂದಿದ್ದ ದೋಣಿಯನ್ನುಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಸ್ಟೀಯರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ಕಳೆದುಕೊಂಡು ಮಂಗಳೂರಿನತ್ತ ಬಂದಿದ್ದ ದೋಣಿ ಹಾಗೂ 31 ಮೀನುಗಾರರನ್ನು ರಕ್ಷಿಸಲಾಗಿದೆ.

ಗೋವಾ ಮೂಲದ ‘ಐಎಫ್‌ಬಿ ಸ್ಯಾಂಟ್‌ ಆಂಟನ್‌ I ಮೀನುಗಾರಿಕಾ ದೋಣಿ ತಾಂತ್ರಿಕ ದೋಷದಿಂದಾಗಿ ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ ತೇಲಾಡುತ್ತಿತ್ತು. 11 ದಿನಗಳಿಂದ ಸಮುದ್ರದ ಮಧ್ಯೆಯೇ ದಿಕ್ಕು ದೆಸೆಯಿಲ್ಲದೆ ತಿರುಗಾಟ ಮಾಡ್ತಿದ್ದ ದೋಣಿ ಹಾಗೂ ಮೀನುಗಾರರನ್ನು ರಕ್ಷಿಸಲಾಗಿದೆ.

ಗೋವಾದ ಈ ದೋಣಿಯ ನಾಪತ್ತೆಯ ಬಗ್ಗೆ ಶುಕ್ರವಾರ (ಅಕ್ಟೋಬರ್ 24) ಮಾಹಿತಿ ಪಡೆದ ನಂತರ, ಮಂಗಳೂರಿನಲ್ಲಿರುವ ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಘಟಕವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮೀನುಗಾರಿಕಾ ದೋಣಿಯು ಮಂಗಳೂರಿನಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಪತ್ತೆಯಾಗಿತ್ತು.

ದಿನನಿತ್ಯದ ಗಸ್ತು ತಿರುಗುತ್ತಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ ಕಸ್ತೂರ್ಬಾ ಗಾಂಧಿ ನೌಕೆಯನ್ನು ನಿಯೋಜಿಸಲಾಗಿದೆ. ಅಂತೆಯೇ ಕೊಚ್ಚಿಯಿಂದ ಕೋಸ್ಟ್ ಗಾರ್ಡ್ ಡಾರ್ನಿಯರ್ ವಿಮಾನವನ್ನು ಸಹ ಹುಡುಕಾಟಕ್ಕೆ ಬಳಸಿಕೊಳ್ಳಲಾಯಿತು.

ಅಕ್ಟೋಬರ್ 25 ರಂದು ಡಾರ್ನಿಯರ್ ವಿಮಾನವು ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಪ್ರತೀಕೂಲ ಹಾವಾಮಾನದ ನಡುವೆಯೂ ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿ ಕಾರ್ಯಚರಣೆ ನಡೆಸಿದೆ.

ನಾಪತ್ತೆಯಾಗಿದ್ದ ದೋಣಿ ಪತ್ತೆಯಾಗುತ್ತಿದ್ದಂತೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಂಕಷ್ಟದಲ್ಲಿದ್ದ ಮೀನುಗಾರಿಕಾ ದೋಣಿಯನ್ನು ತಲುಪಿದ್ದಾರೆ. ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ಒದಗಿಸಿ, ಸಮುದ್ರದಲ್ಲಿಯೇ ಸ್ಟೀರಿಂಗ್ ದೋಷವನ್ನು ಸರಿಪಡಿಸಿದ್ದಾರೆ. ದುರಸ್ತಿ ಕಾರ್ಯದ ನಂತರ, ದೋಣಿಯನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಸುರಕ್ಷಿತವಾಗಿ ಎಳೆತರಲಾಯಿತು.

“ಮೀನುಗಾರರು ದಣಿದಿದ್ದರೂ ಸುರಕ್ಷಿತವಾಗಿದ್ದರು. ನಮ್ಮ ತಂಡ ಅವರಿಗೆ ವೈದ್ಯಕೀಯ ನೆರವು, ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿಯೂ ನಡೆಸಲಾದ ಈ ತ್ವರಿತ ಮತ್ತು ಸಂಘಟಿತ ಸಮುದ್ರ-ವಾಯು ರಕ್ಷಣಾ ಕಾರ್ಯಾಚರಣೆಯು, ಜೀವಗಳನ್ನು ರಕ್ಷಿಸಲು ಮತ್ತು ಸಮುದ್ರದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಕರಾವಳಿ ರಕ್ಷಣಾ ಪಡೆಗಳ ಅಚಲ ಸಮರ್ಪಣೆಯನ್ನು ಒತ್ತಿಹೇಳುತ್ತದೆ” ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Bangalore:ದೆಹಲಿಗೆ ಹೊರಟ ಡಿಕೆ ಶಿವಕುಮಾರ್,ಸಿಎಂ ಆಗೋದು ಕನ್ಪರ್ಮ್?

=============

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page