ಬ್ರೇಕಿಂಗ್ ನ್ಯೂಸ್
ದೇಶ

ಶ್ರೀಲಂಕಾ ಸಮೀಪ ಇರಾನ್ ಯುದ್ಧನೌಕೆ ಮುಳುಗಿಸಿದ ಅಮೇರಿಕ

ಕೊಲಂಬೊ: Tulu Times l ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷವು ಇದೀಗ ಭಾರತೀಯ ಉಪಖಂಡದ ಸಮೀಪಕ್ಕೂ ತಲುಪಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. ಅಮೇರಿಕಾದ ಸಬ್‌ಮರಿನ್, ಇರಾನ್ ಯುದ್ಧನೌಕೆಯನ್ನು ಶ್ರೀಲಂಕಾ ಕರಾವಳಿಯ ಸಮೀಪದ ಭಾರತೀಯ ಮಹಾಸಾಗರದಲ್ಲಿ ಟಾರ್ಪಿಡೊ ದಾಳಿ ನಡೆಸಿ ಮುಳುಗಿಸಿದೆ. ಈ ದಾಳಿಯಲ್ಲಿ ಕನಿಷ್ಠ 83 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಅಮೇರಿಕಾ ರಕ್ಷಣಾ ಕಾರ್ಯದರ್ಶಿ ವಾಷಿಂಗ್ಟನ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಳಿಯನ್ನು ದೃಢಪಡಿಸಿದರು. “ಅಂತರರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್ ಯುದ್ಧನೌಕೆಯನ್ನು ಅಮೆರಿಕ ಸಬ್‌ಮರಿನ್ ಟಾರ್ಪಿಡೊ ದಾಳಿ ನಡೆಸಿ ಮುಳುಗಿಸಿದೆ. ಇದು ದ್ವಿತೀಯ ವಿಶ್ವಯುದ್ಧದ ನಂತರ ಟಾರ್ಪಿಡೊ ಮೂಲಕ ಶತ್ರು ನೌಕೆಯನ್ನು ಮುಳುಗಿಸಿದ ಮೊದಲ ಘಟನೆ,” ಎಂದು ಹೇಳಿದರು. ಅವರು ಇದನ್ನು “ನಿಶ್ಶಬ್ದ ಮರಣ” ಎಂದು ವರ್ಣಿಸಿ, “ನಾವು ಗೆಲ್ಲಲು ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಖಮನೈ ಅಂತ್ಯಕ್ರಿಯೆ ಮುಂದೂಡಿಕೆ

ಇದಾಗಲೇ, ಅಮೆರಿಕ–ಇಸ್ರೇಲ್ ದಾಳಿಯಲ್ಲಿ ತೇಹರಾನ್‌ನಲ್ಲಿ ಮೃತಪಟ್ಟ ಇರಾನ್ ಸುಪ್ರೀಂ ಲೀಡರ್ ಖಮನೈ ಅವರ ರಾಜ್ಯ ಅಂತ್ಯಕ್ರಿಯೆಯನ್ನು ಭಾರೀ ಜನಸಂದಣಿ ನಿರೀಕ್ಷೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಇರಾನ್  ತಿಳಿಸಿದೆ. ಯುದ್ಧ ಪರಿಸ್ಥಿತಿಯ ನಡುವೆಯೇ ಖಾಮೆನೈ ಅವರ ಉತ್ತರಾಧಿಕಾರಿಯನ್ನು ತ್ವರಿತವಾಗಿ ನೇಮಕ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಶ್ರೀಲಂಕಾ ಸಮೀಪ ನಡೆದ ಈ ನೌಕಾ ದಾಳಿ, ಪಶ್ಚಿಮ ಏಷ್ಯಾದ ಸಂಘರ್ಷವನ್ನು ದಕ್ಷಿಣ ಏಷ್ಯಾ ಸಮೀಪಕ್ಕೆ ತಂದಿದ್ದು, ಜಾಗತಿಕ ಸಮುದ್ರ ಮಾರ್ಗಗಳ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ. ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವ ಕುರಿತು ಪ್ರಾದೇಶಿಕ ರಾಷ್ಟ್ರಗಳು ಚರ್ಚೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

US sinks Iranian warship near Sri Lanka: 83 dead – ತುಳುಟೈಮ್ಸ್

ಇದನ್ನೂ ಓದಿ : ಡಾಲರ್ ಎದುರು ರೂಪಾಯಿ ಐತಿಹಾಸಿಕ ಕುಸಿತ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/KpxF-TdEQqM?si=KSFjUp0ASdicRV7v

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 18

You cannot copy content of this page