ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೈಟ್ ಶಿಫ್ಟ್ ಕೆಲಸದಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಳ

ಆರೋಗ್ಯ : Tulu Times l ನೈಟ್ ಶಿಫ್ಟ್ ಕೆಲಸ ಮಾಡುವವರಲ್ಲಿ ಮೂತ್ರಪಿಂಡ ಕಲ್ಲು (Kidney Stone) ಸಮಸ್ಯೆಯ ಅಪಾಯ ಹೆಚ್ಚಾಗಬಹುದು ಎಂಬ ಎಚ್ಚರಿಕೆಯನ್ನು ಹೊಸ ಅಧ್ಯಯನ ನೀಡಿದೆ. ವಿಶೇಷವಾಗಿ ದೀರ್ಘಾವಧಿ ರಾತ್ರಿ ಕೆಲಸ ಮಾಡುವವರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.

ಅಮೆರಿಕಾದ ತಜ್ಞರು, ರಾತ್ರಿ ಕೆಲಸ ದೇಹದ ಜೈವಿಕ ಗಡಿಯಾರವಾದ ಸರ್ಕೇಡಿಯನ್ ರಿದಮ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಈ ಜೈವಿಕ ಸಮತೋಲನ ದೀರ್ಘಕಾಲ ಅಸ್ತವ್ಯಸ್ತವಾದರೆ ಮೂತ್ರಪಿಂಡಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ನಿದ್ರೆಯ ಕೊರತೆ, ನೀರಿನ ಸೇವನೆ ಕಡಿಮೆ ಅಸಮಂಜಸ ಆಹಾರ ಪದ್ಧತಿ, ಹಾರ್ಮೋನ್ ಸಮತೋಲನದಲ್ಲಿ ಬದಲಾವಣೆ ಈ ಎಲ್ಲಾ ಕಾರಣಗಳು ಮೂತ್ರಪಿಂಡದಲ್ಲಿ ಖನಿಜ ಸಂಗ್ರಹ ಹೆಚ್ಚಿಸಿ ಕಲ್ಲು ರೂಪುಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ವೈದ್ಯರು ವಿವರಿಸಿದ್ದಾರೆ. ಆದ್ರೆ ನೈಟ್ ಡ್ಯೂಟಿ ಮಾಡಲೇ ಬೇಕಾದ ಅನಿವಾರ್ಯ ಇರುವವರು ; ದಿನಕ್ಕೆ ಸಮರ್ಪಕ ಪ್ರಮಾಣದಲ್ಲಿ ನೀರು ಕುಡಿಯುವುದು,‌ ಸಮತೋಲನಯುತ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ,‌ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ

Night shift work increases risk of kidney stones: Study warns – ತುಳುಟೈಮ್ಸ್

ಇದನ್ನೂ ಓದಿ : ‘ಮೊಟ್ಟೆ’ಗೆ ಲಾಸ್ಟ್ ಡೇಟ್ ಇದೆಯಾ? ಗ್ರಾಹಕರು ತಿಳಿಯಬೇಕಾದ ಮಹತ್ವದ ಮಾಹಿತಿ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ : https://www.youtube.com/live/KpxF-TdEQqM?si=ZGu4qfDiCd4wjjLd

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page