ಬ್ರೇಕಿಂಗ್ ನ್ಯೂಸ್
ಪುತ್ತೂರು

Puttur:ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲು.

Puttur:ಹಿಂದೂ ಮುಖಂಡ ಪ್ರಭಾಕರ ಭಟ್ ಮೇಲೆ ಕೋಮುದ್ವೇಷ ಪ್ರಚೋದನೆಯ ಪ್ರಕರಣ ದಾಖಲಾಗಿದೆ.ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಇತ್ತೀಚೆಗೆ ಉಪ್ಪಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಕೋಮುದ್ವೇಷ ಮತ್ತು ಮಹಿಳಾ ನಿಂದನೆಯ ಮಾತುಗಳನ್ನಾಡಿದ್ದಾರೆ ಎಂಬುದಾಗಿ ಈಶ್ವರಿ ಪದ್ಮುಂಜ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ ಹೀಗಿದೆ.BNS 79,196,290,302 ಮತ್ತು 3(5) ಕಲಂ ಅಡಿ ಕೇಸ್ ದಾಖಲಾಗಿದೆ.ಉಪ್ಪಳಿಗೆಯಲ್ಲಿ ನಡೆದ ಭಾಷಣದಲ್ಲಿ ಕೋಮುದ್ವೇಷ ಮತ್ತು ಮಹಿಳಾ ನಿಂದನೆಯ ಭಾಷಣ ಮಾಡಿದ್ದಾರೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಭಾಕರ ಭಟ್ಟರ ಇನ್ನೊಂದು ಹೇಳಿಕೆಯ ವಿರುದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಸಲನ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಪ್ರಿಯಾಂಕ್ ಖರ್ಗೆ ಯಾರ್ರೀ ಕಲ್ಲಡ್ಕ ಪ್ರಭಾಕರ ಭಟ್ ಅವ್ರೇನೂ ಕಾನೂನಿಗಿಂತ ದೊಡ್ಡವ್ರಾ,ಕಲ್ಲಡ್ಕ ಅಲ್ಲಾ ಅವ್ರ ಅಪ್ಪನಾದ್ರೂ ಸರಿ ಕಾನೂನಿಗಿಂತ ದೊಡ್ಡವರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ.ಕೋರ್ಟ್ ಪರ್ಮಿಶನ್ ಕೊಟ್ರೆ ಮಾಡ್ಲಿ,ವಿದೌಟ್ ಪರ್ಮಿಶನ್ ಪಥಸಂಚಲನ ಮಾಡಿದ್ರೆ ಸರ್ಕಾರ ಏನು ಕತ್ತೆ ಕಾಯ್ತಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಆರ್ ಎಸ್ ಎಸ್ ಶಾಖೆಯಲ್ಲಿ ಮಾತಾಡಿದಂತೆ ಪಬ್ಲಿಕ್ ನಲ್ಲಿ ಮಾತಾಡುವುದು ಬೇಡ,ಪ್ರೇರೇಪಿಸುವ ಮಾತುಗಳನ್ನಾಡಿ ದಿಕ್ಕುತಪ್ಪಿಸುವುದು ಬೇಡ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಒಂದೆ ಎಂದಿದ್ದಾರೆ.ಪ್ರಿಯಾಂಕ ಖರ್ಗೆ.

ಕಲ್ಲಡ್ಕ ಪ್ರಭಾಕರ ಭಟ್ ಚಿತ್ತಾಪುರದಲ್ಲಿ ಪಥಸಂಚಲನ ಮಾಡಿಯೇ ಮಾಡುತ್ತೇವೆ ಎಂದು ಹೇಳುತ್ತಾ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರರಕ್ಷಣೆ ಮಾಡುವ ಸಂಘಟನೆ ಪ್ರವಾಹ,ಬರಗಾಲ ಬಂದಾಗ ನೆರವಿಗೆ ಹೋಗುವ ಸಂಘಟನೆ ಆರ್ ಎಸ್ ಎಸ್ ಇಂತಹ ಸಂಘಟನೆಯನ್ನು ನಿಷೇಧಿಸ್ತಿರಲ್ಲ ಎಂದ ಸರ್ಕಾರವನ್ನು ಪ್ರಶ್ನಿಸಿದ್ರು.

 

ಇದನ್ನೂ ಓದಿ:Rss ban:ಯಾರ್ರೀ…ಅದು ಕಲ್ಲಡ್ಕ ಪ್ರಭಾಕರ ಭಟ್,ಅವ್ರ ಅಪ್ಪನಾದ್ರೂ ಸರಿ?
………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page