ಬ್ರೇಕಿಂಗ್ ನ್ಯೂಸ್
ಪುತ್ತೂರು

ನರಿಮೊಗರು ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆರೋಪ?

ಪುತ್ತೂರು: Tulu Times l 2025ರ ಜೂನ್‌ನಿಂದ ಅಕ್ಟೋಬರ್ ತನಕದ ಐದು ತಿಂಗಳ ಅವಧಿಯಲ್ಲಿ ಸಂಘದ ಸದಸ್ಯರಲ್ಲದವರಿಂದ ಬೇನಾಮಿಯಾಗಿ ಸಂಘದ ಖಾತೆಗೆ ರೂ.1,11,10,000 ಹಣ ಹಲವು ಕಂತುಗಳಲ್ಲಿ ಜಮೆಯಾಗಿರುವುದು ಗಂಭೀರ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಹಾಗೂ ಸಂಘದ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಆರೋಪಿಸಿದರು.

ಪುತ್ತೂರಿನಲ್ಲಿ ಶುಕ್ರವಾರ (ಫೆ.28) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದು, ರೂ.1.10 ಕೋಟಿಗೂ ಅಧಿಕ ಹಣದ ಅನಧಿಕೃತ ವರ್ಗಾವಣೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

ನವೀನ್ ಡಿ ಅವರ ಅಧ್ಯಕ್ಷತೆಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಅನಧಿಕೃತ ಹಣ ವರ್ಗಾವಣೆ ನಡೆಯುತ್ತಿದೆ. ಜಮೆಯಾದ ಹಣವನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿಕೊಂಡು ಸಂಘದ ಹಿರಿಯ ಗುಮಾಸ್ತ ಜಯರಾಮ ಬಿ ಅವರ ಉಳಿತಾಯ ಖಾತೆಗೆ ಬೇರೆ ಬೇರೆ ದಿನಗಳಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.

ಪ್ರಕರಣ ಬಹಿರಂಗವಾದ ನಂತರ ಹಿರಿಯ ಗುಮಾಸ್ತ ಜಯರಾಮ ಅವರನ್ನು ಹಿರಿಯ ಗುಮಾಸ್ತ ಹುದ್ದೆಯಿಂದ ಕಿರಿಯ ಗುಮಾಸ್ತ ಹುದ್ದೆಗೆ ಹಿಂಬಡ್ತಿ ನೀಡಿ ಸಂಘದ ಆನಾಜೆ ಶಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಜಂಟಿ ನಿಬಂಧಕರು, ವಿಭಾಗೀಯ ನಿಬಂಧಕರು, ರಾಜ್ಯ ಸಹಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಪರಮೇಶ್ವರ ಭಂಡಾರಿ, ಮಾಜಿ ನಿರ್ದೇಶಕರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಮೋಹನ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.

Accusations of crores of rupees being misappropriated in Narimogaru Cooperative Society? – ತುಳುಟೈಮ್ಸ್

ಇದನ್ನೂ ಓದಿ : ರಾಷ್ಟ್ರೀಯ ವಿಜ್ಞಾನ‌ ದಿನ : ವಿಜ್ಞಾನವು ಕೇವಲ ಪರೀಕ್ಷೆಯ ವಿಷಯವಲ್ಲ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/ePjVn-NUxAA?si=yCe3z9tfVtkkIFgq

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page