ಕರ್ನಾಟಕ : Tulu Times l ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾರ್ಗದರ್ಶನದಲ್ಲಿ, ‘ಒನ್ ನೇಶನ್ ಒನ್ ಕಾರ್ಡ್’ ಯೋಜನೆಯಡಿ ಕರ್ನಾಟಕದ ಎಲ್ಲಾ RTO ಕಚೇರಿಗಳಲ್ಲಿ ಹೊಸ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೊಂಡಿದೆ. ಕಳೆದ ಎರಡು ತಿಂಗಳಿನಿಂದ ಈ ವ್ಯವಸ್ಥೆ ರಾಜ್ಯದಾದ್ಯಂತ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾರ್ಯನಿರ್ವಹಿಸುತ್ತಿದೆ.
ಏನು ಈ ಹೊಸ ಸ್ಮಾರ್ಟ್ ಕಾರ್ಡ್?
ವಾಹನ ನೋಂದಣಿ (RC) ಮತ್ತು ಚಾಲನಾ ಪರವಾನಗಿ (DL) ಒಂದೇ ಮಾದರಿಯ ಕಾರ್ಡ್
ಕಾರ್ಡ್‌ನಲ್ಲಿ ಇಲೆಕ್ಟ್ರಾನಿಕ್ ಚಿಪ್ + QR ಕೋಡ್
ವಾಹನ ಮತ್ತು ಮಾಲೀಕರ ಮಾಹಿತಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗಿರುತ್ತದೆ.
ಯೋಜನೆಯ ಉದ್ದೇಶ ;
ನಕಲಿ ದಾಖಲೆಗಳನ್ನು ತಡೆಯುವುದು, ತಪಾಸಣೆ ವೇಳೆ ತಕ್ಷಣ ಮಾಹಿತಿ ಪರಿಶೀಲನೆ, ನಾಗರಿಕರಿಗೆ ಸುಲಭ ಸೇವೆ, Digital India ಯೋಜನೆಗೆ ಬೆಂಬಲ ನೀಡುವುದಾಗಿದೆ.
ಈ ಕಾರ್ಡ್‌ಗಳನ್ನು National Informatics Centre ಸಹಯೋಗದಲ್ಲಿ ರೂಪಿಸಲಾಗಿದೆ. ಇವುಗಳನ್ನು ಪರಿವಾಹನ್ ಸೇವಾ ಪೋರ್ಟಲ್‌ಗೆ ಲಿಂಕ್ ಮಾಡಬಹುದು. ಒಂದು ರಾಜ್ಯದಲ್ಲಿ ಪಡೆದ DL/RC ಇನ್ನೊಂದು ರಾಜ್ಯದಲ್ಲೂ ಸುಲಭವಾಗಿ ಮಾನ್ಯವಾಗುತ್ತದೆ. ಕಚೇರಿಗಳಿಗೆ ಪದೇ ಪದೇ ಹೋಗುವ ಅವಶ್ಯಕತೆ ಕಡಿಮೆಯಾಗುತ್ತದೆ. ಇನ್ನೀಗ ಹೊಸ ವಾಹನ ನೋಂದಣಿ ಮಾಡಿದವರಿಗೆ ಹೊಸ DL ಅರ್ಜಿದಾರರಿಗೆ
ಮಾಲೀಕತ್ವ ಬದಲಾವಣೆ, RC ನವೀಕರಣ, ಹೈಪೊಥೆಕೇಶನ್ ಮುಕ್ತಾಯ, ವಿಳಾಸ ಬದಲಾವಣೆ, DL ನವೀಕರಣ ಮಾಡಿಕೊಡುವುದರ ಜೊತೆಗೆ, ಹಳೆಯ ಕಾರ್ಡ್‌ಗಳು ಈಗಾಗಲೇ ಮಾನ್ಯವಾಗಿದ್ದು, ಹಳೆಯ ಕಾರ್ಡ್‌ಗಳಲ್ಲಿ ಅಕ್ಷರ ಮಾಸುವ ಸಮಸ್ಯೆ ಇಲ್ಲ. QR ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ಮಾಹಿತಿ ತಕ್ಷಣ ಲಭ್ಯ, ಸುರಕ್ಷಿತ ಮತ್ತು ದೀರ್ಘಕಾಲಿಕವಾಗಿರುತ್ತದೆ.
New smart cards available at all RTO offices in Karnataka – ತುಳುಟೈಮ್ಸ್
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮದ್ವೆ ಆಮಂತ್ರಣದ ಬಗ್ಗೆ ರಿಷಬ್ ಶೆಟ್ಟಿ ಶಾಕಿಂಗ್ ಹೇಳಿಕೆ..!
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/ePjVn-NUxAA?si=sT1A0I4A83JZavGY











