ಬ್ರೇಕಿಂಗ್ ನ್ಯೂಸ್
ರಾಜಕೀಯ

Rss ban:ಯಾರ್ರೀ…ಅದು ಕಲ್ಲಡ್ಕ ಪ್ರಭಾಕರ ಭಟ್,ಅವ್ರ ಅಪ್ಪನಾದ್ರೂ ಸರಿ?

Rss ban:ರಾಜ್ಯದಲ್ಲಿ ಆರ್ ಎಸ್ ಎಸ್  ಕಾರ್ಯಕ್ರಮಗಳನ್ನು ಸರ್ಕಾರಿ ಜಾಗಗಳಲ್ಲಿ ನಿಷೇಧ ಮಾಡಿರುವ ಕ್ರಮ,ಆರ್ ಎಸ್ ಎಸ್ ಮತ್ತು ಸರ್ಕಾರದ ತಿಕ್ಕಾಟಕ್ಕೆ ಕಾರಣವಾಗಿದೆ.
ಇದೀಗ ನೇರವಾಗಿ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ವಾಗ್ಧಾಳಿ ನಡೆಸಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಸಲನ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಪ್ರಿಯಾಂಕ್ ಖರ್ಗೆ ಯಾರ್ರೀ ಕಲ್ಲಡ್ಕ ಪ್ರಭಾಕರ ಭಟ್ ಅವ್ರೇನೂ ಕಾನೂನಿಗಿಂತ ದೊಡ್ಡವ್ರಾ,ಕಲ್ಲಡ್ಕ ಅಲ್ಲಾ ಅವ್ರ ಅಪ್ಪನಾದ್ರೂ ಸರಿ ಕಾನೂನಿಗಿಂತ ದೊಡ್ಡವರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ.ಕೋರ್ಟ್ ಪರ್ಮಿಶನ್ ಕೊಟ್ರೆ ಮಾಡ್ಲಿ,ವಿದೌಟ್ ಪರ್ಮಿಶನ್ ಪಥಸಂಚಲನ ಮಾಡಿದ್ರೆ ಸರ್ಕಾರ ಏನು ಕತ್ತೆ ಕಾಯ್ತಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಆರ್ ಎಸ್ ಎಸ್ ಶಾಖೆಯಲ್ಲಿ ಮಾತಾಡಿದಂತೆ ಪಬ್ಲಿಕ್ ನಲ್ಲಿ ಮಾತಾಡುವುದು ಬೇಡ,ಪ್ರೇರೇಪಿಸುವ ಮಾತುಗಳನ್ನಾಡಿ ದಿಕ್ಕುತಪ್ಪಿಸುವುದು ಬೇಡ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಒಂದೆ ಎಂದಿದ್ದಾರೆ.ಪ್ರಿಯಾಂಕ ಖರ್ಗೆ.

ಕಲ್ಲಡ್ಕ ಪ್ರಭಾಕರ ಭಟ್ ಚಿತ್ತಾಪುರದಲ್ಲಿ ಪಥಸಂಚಲನ ಮಾಡಿಯೇ ಮಾಡುತ್ತೇವೆ ಎಂದು ಹೇಳುತ್ತಾ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರರಕ್ಷಣೆ ಮಾಡುವ ಸಂಘಟನೆ ಪ್ರವಾಹ,ಬರಗಾಲ ಬಂದಾಗ ನೆರವಿಗೆ ಹೋಗುವ ಸಂಘಟನೆ ಆರ್ ಎಸ್ ಎಸ್ ಇಂತಹ ಸಂಘಟನೆಯನ್ನು ನಿಷೇಧಿಸ್ತಿರಲ್ಲ ಎಂದ ಸರ್ಕಾರವನ್ನು ಪ್ರಶ್ನಿಸಿದ್ರು.

ರಾಜ್ಯ ಸರ್ಕಾರ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಮನ್ನಣೆ ಕೊಟ್ಟು.ಸಚಿವ ಸಂಪುಟ ಸಭೆಯಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿಷೇಧ ಹೇರಿ ನಿರ್ಣಯ ಕೈಗೊಳ್ಳಲಾಗಿತ್ತು.ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಸಂಘದ ಚಟುವಟಿಕೆ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ.ಆರ್ ಎಸ್ ಎಸ್ ನ ಕಾರ್ಯಕ್ರಮಕ್ಕೆ ಅನುಮತಿ ಪಡೆದೇ ಮಾಡಬೇಕಾಗುತ್ತದೆ.ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಸರ್ಕಾರಕ್ಕೆ ಒಳಪಟ್ಟ ಪಾರ್ಕ್,ಗ್ರೌಂಡ್,ಅನುದಾನಿತ ಶಾಲೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನ ಆರ್ ಎಸ್ ಎಸ್ ಹೀಗೆ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವ ಯಾವುದೇ ಸ್ಥಳಗಳಲ್ಲಿ ಆರ್ ಎಸ್ ಎಸ್ ಯಾವುದೇ ಚಟುವಟಿಕೆ ನಡೆಸದಂತೆ ಕರ್ನಾಟಕದಲ್ಲಿ ಸರ್ಕಾರ ನಿಷೇಧ ಹೇರಿದೆ.

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದು ಸಂಘದ ಚಟುವಟಿಕೆಯನ್ನು ನಿಷೇಧಿಸುವಂತೆ ಕೇಳಿಕೊಂಡಿದ್ದರು. ಪ್ರಿಯಾಂಕ ಖರ್ಗೆ ಬರೆದ ಪತ್ರದಲ್ಲಿ ಸಂಘವೂ ಅಶಾಂತಿಗೆ ಕಾರಣವಾಗ್ತಿದೆ.ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಯ ಗ್ರೌಂಡ್ ಗಳಲ್ಲಿ ಶಾಖೆ ನಡೆಸಲಾಗ್ತಿದೆ.ಜೊತೆಗೆ ಜೋರಾಗಿ ಘೋಷಣೆಗಳನ್ನು ಕೂಗಿ ಯುವಕರ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ದವಾಗಿ ಸಂವಿಧಾನದ ವಿಚಾರಗಳ ವಿರುದ್ದವಾಗಿ ಸಮಾಜದಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬುತ್ತಿದೆ.ಪೊಲೀಸರ ಅನುಮತಿಯಿಲ್ಲದೆ.ದೊಣ್ಣೆಗಳನ್ನು ಹಿಡಿದು ಅಕ್ರಮಣಕಾರಿ ಪ್ರದರ್ಶನ ನಡೆಸ್ತಾರೆ.ಇದರಿಂದಾಗಿ ಮುಗ್ಧ ಮಕ್ಕಳು ಮತ್ತು ಯುವಜನರ ಮೇಲೆ ದುಷ್ಟರಿಣಾಮ ಬೀರಲಾಗ್ತಿದೆ.

ನಾಡಿನ ಮಕ್ಕಳು ಯುವ ಸಮುದಾಯ ಸಾರ್ವಜನಿಕರು ಸಮಾಜದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು,ಅನುದಾನಿತ ಶಾಲೆಗಳು ಗ್ರೌಂಡ್ ಗಳು,ಮುಜರಾಯಿ ಇಲಾಖೆಯ ದೇವಸ್ಥಾನ,ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ ಸಂಘದ ಶಾಖೆ,ಬೈಠಕ್ ಇನ್ನಿತರ ಆರ್ ಎಸ್ ಎಸ್ ನ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿಯವರಿಗೆ ಪ್ರಿಯಾಂಕ್  ಖರ್ಗೆ ಪತ್ರ ಬರೆದಿದ್ದರು.

ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಮನ್ನಣೆ ನೀಡಿ ಇದೀಗ ಸಚಿವ ಸಂಪುಟ ಕ್ರಮ ಕೈಗೊಂಡಿದ್ದು,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ಪ್ರದೇಶಗಳಲ್ಲಿ ನಿಷೇಧ ಹೇರಿ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿರ್ಧಾರದ ನಂತರದಿಂದ ಆರ್ ಎಸ್ ಎಸ್ ಮತ್ತು ಸರ್ಕಾರದ ನಡುವಿನ ಮಾತಿನ ಜಟಾಪಟಿ ಜೋರಾಗಿದೆ.

ಇದನ್ನೂ ಓದಿ:
Puttur: ಅಕ್ರಮ ಗೋಸಾಗಾಟಕ್ಕೆ ಬ್ರೇಕ್‌; ಕಾರ್ಯಚರಣೆ ವೇಳೆ ಪುತ್ತಿಲ ಕೈಯಲ್ಲಿ ತಲ್ವಾರ್‌ – ಎಸ್‌ಪಿ ಸ್ಪಷ್ಟನೆ
…………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/watch?v=Tv2igDzOLtA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page