ಮಂಗಳೂರು: Tulu Times |ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿ 5 ಪರೀಕ್ಷಾ ಕೇಂದ್ರಗಳು ಸೇರ್ಪಡೆಕೊಂಡಿವೆ.
ಇದನ್ನೂ ಓದಿ: CSE : ಯುಪಿಎಸ್ ಸಿ 2026 ನೋಂದಣಿ ಇಂದು ಸಂಜೆ 6.00 ಗಂಟೆಗೆ ಮುಕ್ತಾಯ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಕಂಡಿದ್ದು, ಇದರಂತೆ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚುವರಿಯಾಗಿದೆ ಎನ್ನಲಾಗಿದೆ. ಹೆಚ್ಚುವರಿ 5 ಕೇಂದ್ರಗಳ ಪೈಕಿ 3 ಕೇಂದ್ರಗಳು ಮಂಗಳೂರಿಗೆ ಸೇರ್ಪಡೆಯಾಗಿದ್ದು, ಕಳೆದ ವರ್ಷ 54 ಪರೀಕ್ಷಾ ಕೇಂದ್ರಗಳು ಇತ್ತು. ಈ ಬಾರಿ ಇದು 59ಕ್ಕೆ ಏರಿಸಲಾಗಿದೆ. ಉಳಿದ 2 ಇತರ ತಾಲೂಕಿನಲ್ಲಿ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಕಡಬ: ಸುಬ್ರಹ್ಮಣ್ಯ ರೇಂಜ್ ಅರಣ್ಯ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ
ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ಮಂಗಳೂರಿನಲ್ಲಿ 21 ಪರೀಕ್ಷಾ ಕೇಂದ್ರಗಳಿವೆ. ಬಂಟ್ವಾಳದಲ್ಲಿ 6, ಬೆಳ್ತಂಗಡಿಯಲ್ಲಿ 8, ಪುತ್ತೂರು 5, ಸುಳ್ಯದಲ್ಲಿ 2, ಕಡಬದಲ್ಲಿ 5, ಮೂಡುಬಿದಿರೆ 6, ಉಳ್ಳಾಲ 4, ಮೂಲ್ಕಿ 2 ಪರೀಕ್ಷಾ ಕೇಂದ್ರಗಳನ್ನು ಈ ಬಾರಿ ಮಾಡಲಾಗಿದೆ. ಜಿಲ್ಲೆಯ 15 ಸರಕಾರಿ, 22 ಖಾಸಗಿ ಅನುದಾನಿತ ಮತ್ತು 22 ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಹಂಚಿಕೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕಲಾ ವಿಭಾಗದಲ್ಲಿ 3,724, ವಾಣಿಜ್ಯ ವಿಭಾಗದಲ್ಲಿ 15,504 ಹಾಗೂ ವಿಜ್ಞಾನ ವಿಭಾಗದಲ್ಲಿ 18,559 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಸತ್ಯ ಬಿಚ್ಚಿಟ್ಟ ಗಾಯಕಿ ಅಖಿಲಾ ಪಜಿಮಣ್ಣು !
PUC examination centers have increased this time in Dakshina Kannada!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










