ಪರೀಕ್ಷೆ : Tulu Times l ಭಾರತ ಸರ್ಕಾರದ ಪ್ರಮುಖ ಸಂವಿಧಾನಿಕ ಆಯೋಗವಾಗಿದ್ದು, ದೇಶದ ಉನ್ನತ ಸರ್ಕಾರಿ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆಗಳನ್ನು ನಡೆಸುತ್ತಿದ್ದು, UPSC ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆ (CSE) 2026ರ ಅರ್ಜಿ ಸಲ್ಲಿಕೆಗಾಗಿ ವಿಸ್ತರಿಸಿದ್ದ ಅವಧಿ ಇಂದು (ಫೆಬ್ರವರಿ 27, 2026) ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮೊದಲು ಫೆಬ್ರವರಿ 24ರ ಗಡುವನ್ನು ಆಯೋಗ ವಿಸ್ತರಿಸಿತ್ತು. ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ತಕ್ಷಣವೇ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರಿಲಿಮ್ಸ್ ಪರೀಕ್ಷೆ ಮೇ 24, 2026ರಂದು ನಡೆಯಲಿದೆ ಎಂದು ವರದಿಯಾಗಿದೆ.
ಪ್ರಿಲಿಮ್ಸ್ ಪರೀಕ್ಷೆಯ ಮಾದರಿ
ಎರಡು ಆಬ್ಜೆಕ್ಟಿವ್ ಪ್ರಶ್ನಾಪತ್ರಿಕೆಗಳು:
ಸಾಮಾನ್ಯ ಅಧ್ಯಯನ (GS Paper I)
CSAT (GS Paper II)
ಪ್ರತಿ ಪೇಪರ್: 2 ಗಂಟೆ
ಪ್ರತಿ ಪೇಪರ್‌ಗೆ 200 ಅಂಕ
GS I: ಇತಿಹಾಸ, ಭೂಗೋಳ, ರಾಜಕೀಯ, ಅರ್ಥಶಾಸ್ತ್ರ, ವಿಜ್ಞಾನ ಇತ್ಯಾದಿ
CSAT: ತಾರ್ಕಿಕ ಚಿಂತನೆ, ಗಣಿತ, ವಿಶ್ಲೇಷಣಾ ಸಾಮರ್ಥ್ಯ
ಮುಖ್ಯ ದಿನಾಂಕಗಳು ;
ಅಧಿಸೂಚನೆ ಬಿಡುಗಡೆ: ಫೆಬ್ರವರಿ 4, 2026
ಅರ್ಜಿ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 27, 2026 (ಸಂಜೆ 6)
ಪ್ರಿಲಿಮ್ಸ್ ಪರೀಕ್ಷೆ: ಮೇ 24, 2026
ಅಗತ್ಯ ದಾಖಲೆಗಳು ;
* ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ (UPSC ನಿಯಮದಂತೆ)
* ಸಹಿ ಸ್ಕ್ಯಾನ್ ಪ್ರತಿಗಳು
* ಫೋಟೋ ಐಡಿ (ಆಧಾರ್/ಪ್ಯಾನ್/ಪಾಸ್‌ಪೋರ್ಟ್/ಮತದಾರ ಗುರುತಿನ ಚೀಟಿ)
* ಪದವಿ ವಿವರಗಳು
* ವರ್ಗ ಪ್ರಮಾಣಪತ್ರ (SC/ST/OBC/EWS ಇದ್ದಲ್ಲಿ)
* PwBD ಪ್ರಮಾಣಪತ್ರ (ಅಗತ್ಯವಿದ್ದರೆ)
ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ ;
upsconline.nic.in ವೆಬ್‌ಸೈಟ್‌ಗೆ ಭೇಟಿ ನೀಡಿ, One-Time Registration (OTR) ಪೂರ್ಣಗೊಳಿಸಿ, CSE 2026 ಅರ್ಜಿ ಲಿಂಕ್ ಕ್ಲಿಕ್ ಮಾಡಿ.ವೈಯಕ್ತಿಕ ಮತ್ತು ವಿದ್ಯಾರ್ಹತಾ ವಿವರಗಳನ್ನು ನಮೂದಿಸಿ. ಫೋಟೋ, ಸಹಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ವಿವರಗಳನ್ನು ಮರುಪರಿಶೀಲಿಸಿ ಸಲ್ಲಿಸಿ, ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ, ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.
CSE: UPSC 2026 registration ends today at 6.00 pm – ತುಳುಟೈಮ್ಸ್
ಇದನ್ನೂ ಓದಿ :ಕವಳ ಚಿತ್ರಕ್ಕೆ ಕ್ರೇಜಿಸ್ಟಾರ್ ನಟ ರವಿಚಂದ್ರನ್ ಚಾಲನೆ !
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/KlcZ9m1ZJ5U?si=hDCxTlEqsrUG5AyS










