ರಾಷ್ಟ್ರ : Tulu Times l ಅಫ್ಘಾನಿಸ್ತಾನ ಹಾಗೂ ಪಾಕಿಸ್ರಾನ ನಡುವಿನ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ತಾರಕ್ಕೇರಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಭಾರೀ ದಾಳಿಯನ್ನು ಆರಂಭಿಸಿರುವುದಾಗಿ ತಿಳಿಸಿದೆ. ಕಳೆದ ವಾರ ಪಾಕಿಸ್ತಾನ ನಡೆಸಿದ ವಾಯು ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿರುವುದಾಗಿ ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ವಕ್ತಾರ ಜ್ಝಬಿಹುಲಾಲ್ ಮುಜಾಹಿದ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪಾಕಿಸ್ತಾನ ಸೇನೆಯ ಪ್ರಚೋದನೆಗಳು ಹಾಗೂ ಗಡಿ ಉಲ್ಲಂಘನೆಗಳಿಗೆ ಪ್ರತಿಯಾಗಿ ದೊಡ್ಡ ಮಟ್ಟದ ಸೈನಿಕ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಗಡಿಯಾದ್ಯಂತ ಪಾಕಿಸ್ತಾನದ ಸೈನಿಕ ತಾಣಗಳು ಹಾಗೂ ಸ್ಥಾಪನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇರಡು ದೇಶಗಳ ನಡುವೆ 2,611 ಕಿಲೋಮೀಟರ್ ಉದ್ದದ ಗಡಿ ಇದೆ. ಈ ಗಡಿಯನ್ನು ದುರಂದ್ ಲೈನ್ ಎಂದು ಕರೆಯಲಾಗುತ್ತದೆ. ಆದರೆ ಈ ಗಡಿಯನ್ನು ಅಫ್ಘಾನಿಸ್ತಾನ ಅಧಿಕೃತವಾಗಿ ಮಾನ್ಯತೆ ನೀಡಿಲ್ಲ. ಇದರಿಂದಾಗಿ ಗಡಿ ವಿವಾದ ಹಲವು ವರ್ಷಗಳಿಂದ ಮುಂದುವರಿದಿದೆ.
ಭಾನುವಾರ ಪಾಕಿಸ್ತಾನ ಸೇನೆ ಗಡಿ ಪ್ರದೇಶದಲ್ಲಿ ವಾಯು ದಾಳಿ ನಡೆಸಿ ಕನಿಷ್ಠ 70 ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಆದರೆ ಅಫ್ಘಾನಿಸ್ತಾನ ಈ ಆರೋಪವನ್ನು ತಳ್ಳಿ ಹಾಕಿದ್ದು, ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸೇರಿದಂತೆ ನಿರಪರಾಧ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ. ಇದೀಗ ಎರಡೂ ರಾಷ್ಟ್ರಗಳ ನಡುವೆ ಉಂಟಾದ ಈ ಸೈನಿಕ ಉದ್ವಿಗ್ನತೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆತಂಕವನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ರೂಪ ಪಡೆಯಲಿದೆ ಎಂಬುದರ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಕಣ್ಣಿಟ್ಟಿದೆ.
Attack on Pakistan from Afghanistan: Heavy clash in border area – ತುಳುಟೈಮ್ಸ್
ಇದನ್ನೂ ಓದಿ :ಕಡಬ: ಸುಬ್ರಹ್ಮಣ್ಯ ರೇಂಜ್ ಅರಣ್ಯ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/KlcZ9m1ZJ5U?si=wGY8WluGJXO-z19C











