ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆಗೆ ಪಾರದರ್ಶಕತೆ : ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ಕರ್ನಾಟಕ : Tulu Times l ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆ ವೇಳೆ ನಾಗರಿಕರ ಮೇಲೆ ಆಗುತ್ತಿರುವ ಹಿಂಸೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳುವ ಪೊಲೀಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಧರಿಸುವುದು ಕಡ್ಡಾಯವಾಗಿರುತ್ತದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಎಂ.ಎ. ಸಲೀಂ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಕ್ರಮದಿಂದ ಪರಿಶೀಲನಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ ಹಾಗೂ ಲಂಚದ ಬೇಡಿಕೆ, ಅನಗತ್ಯ ವಿಳಂಬಗಳಂತಹ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಮಾರ್ಗಸೂಚಿಗಳು ;

ಹೊಸ ನಿಯಮಗಳ ಪ್ರಕಾರ, ಪೊಲೀಸ್ ಸಿಬ್ಬಂದಿ ಅರ್ಜಿದಾರರು ನೀಡಿರುವ ವಿಳಾಸಕ್ಕೆ ಸ್ವತಃ ಭೇಟಿ ನೀಡಬೇಕು. ನೆರೆಹೊರೆಯವರು ಹಾಗೂ ಸ್ಥಳೀಯರಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು. ಪರಿಶೀಲನೆಗಾಗಿ ಅರ್ಜಿದಾರರನ್ನು ಠಾಣೆಗೆ ಕರೆಯುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪರಿಶೀಲನೆಗೆ ಬರುವುದಕ್ಕೂ ಮುನ್ನ ಕನಿಷ್ಠ 24 ಗಂಟೆಗಳ ಮೊದಲು ಎಸ್‌ಎಂಎಸ್ ಅಥವಾ ಫೋನ್ ಕರೆ ಮೂಲಕ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂಬುದೂ ಕಡ್ಡಾಯವಾಗಿದೆ.

ಬಾಡಿ ಕ್ಯಾಮೆರಾ ಮೂಲಕ ಪಾರದರ್ಶಕತೆ ;

ಪರಿಶೀಲನೆ ಪ್ರಾರಂಭವಾದ ಕ್ಷಣದಿಂದ ಮುಗಿಯುವವರೆಗೆ ಬಾಡಿ ಕ್ಯಾಮೆರಾ ಆನ್‌ ಇರಬೇಕು. ಸಂಪೂರ್ಣ ಪ್ರಕ್ರಿಯೆಯನ್ನು ದಾಖಲು ಮಾಡುವ ಮೂಲಕ ಯಾವುದೇ ದೂರು ಅಥವಾ ಅನುಮಾನಗಳಿಗೆ ಸ್ಪಷ್ಟ ಸಾಕ್ಷ್ಯ ದೊರೆಯಲಿದೆ. ನಿಯಮ ಉಲ್ಲಂಘಿಸಿದ ಸಿಬ್ಬಂದಿಗೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

ಈ ನಿಯಮಗಳ ಅನುಷ್ಠಾನವನ್ನು ಘಟಕ ಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು ಮತ್ತು ವಾರದ ವರದಿಯನ್ನು ಮುಖ್ಯ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ವಿಶೇಷ ಸಮಸ್ಯೆಗಳು ಎದುರಾದರೆ ಸಂಬಂಧಿತ ಎಸ್‌ಪಿ ಅವರ ಪೂರ್ವಾನುಮತಿ ಪಡೆಯಬೇಕು. ಒಟ್ಟಿನಲ್ಲಿ, ಈ ಕ್ರಮ ಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ನಾಗರಿಕ ಸ್ನೇಹಿಯಾಗಿ ರೂಪಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Transparency in passport police verification: Karnataka government’s important decision – ತುಳುಟೈಮ್ಸ್

ಇದನ್ನೂ ಓದಿ : ಡಿವೋರ್ಸ್‌ ಸತ್ಯ ಬಿಚ್ಚಿಟ್ಟ ಗಾಯಕಿ ಅಖಿಲಾ ಪಜಿಮಣ್ಣು !

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/KlcZ9m1ZJ5U?si=WQ9e1yoBGbyW3-lg

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page